NewsNews In KannadaNorth Karnataka

ಕಿಮ್ಸ್ ಸಂಸ್ಥೆಯಲ್ಲಿ ಹೊಸ ಎಂ.ಆರ್.ಐ ಯಂತ್ರ ಅಳವಡಿಕೆ; ರೋಗಿಗಳಿಗೆ 24/7 ಸೇವೆ

ಹುಬ್ಬಳ್ಳಿ , ಮಾ‌.19: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಯಲ್ಲಿ ಹೊಸದಾಗಿ ಎಂ.ಆರ್.ಐ ಯಂತ್ರ ಅಳವಡಿಸಲಾಗಿದ್ದು, 24/7 ರೋಗಿಗಳ ಸೇವೆಗೆ ಲಭ್ಯವಾಗಿರಲಿದೆ.

ಈ ಹಿಂದೆ ಕೆ.ಎಲ್.ಇ ಸಂಸ್ಥೆಯ ಖಾಸಗಿ ಆಡಳಿತ ಹಾಗೂ ಸರ್ಕಾರದ ಒಡಂಬಡಿಕೆಯಲ್ಲಿ ಇದ್ದಂತಹ ಎಂ.ಆರ್.ಐ ಯಂತ್ರದ ಅವಧಿ ಮುಗಿದ ಕಾರಣ, ಎಂ.ಆರ್.ಐ ಸ್ಕ್ಯಾನ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಈಗ ಹೊಸ ಎಂ.ಆರ್.ಐ ಯಂತ್ರ ರೋಗಿಗಳ ಸೇವೆಗೆ ಲಭ್ಯವಾಗಿರುತ್ತದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದಿನಕ್ಕೆ 20 ರಿಂದ 25 ಎಂ.ಆರ್.ಐ ಸ್ಕ್ಯಾನ್‌ ಗಳನ್ನು ಮಾಡಲಾಗುತ್ತಿದೆ. ಕಿಮ್ಸ್ ಸಂಸ್ಥೆಯಲ್ಲಿ ಅತೀ ಕಡಿಮೆ ದರದಲ್ಲಿ ಎಂ.ಆರ್.ಐ. ಸ್ಕ್ಯಾನ್ ಸೇವೆ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ರೋಗಿಗಳು ಪಡೆದುಕೊಳ್ಳಬೇಕು ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಎಸ್.ಎಫ್.ಕಮ್ಮಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

 

Please follow and like us:

Leave a Reply

Your email address will not be published.

Back to top button
Close