ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ ಕೊನೇಯ ದಿನವಾದ ಇಂದು 11 ಜನ ಅಭ್ಯರ್ಥಿಗಳಿಂದ 12 ನಾಮಪತ್ರ ಸಲ್ಲಿಕೆ:ಚುನಾವಣಾಧಿಕಾರಿ ದಿವ್ಯ ಪ್ರಭು
ಧಾರವಾಡ ಏ.19: ಧಾರವಾಡ ಲೋಕಸಭಾ ಮತಕ್ಷತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೇಯ ದಿನವಾದ ಇಂದು (ಏ.19) 11 ಜನ ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂದು
ಪಕ್ಷೇತರ ಅಭ್ಯರ್ಥಿಯಾಗಿ ರೀಯಾಜ ಶೇಖ, ಪ್ರವೀಣಕುಮಾರ ಮಾದರ, ಪ್ರವೀಣ ಹತ್ತೆನವರ, ರಾಹುಲ ಗಾಂದಿ ಎನ್. ಹಾಗೂ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹ್ಮದ ಇಸ್ಮಾಯಿಲ್ ಮುಕ್ತಿ, ರೈತ ಭಾರತ ಪಾರ್ಟಿಯಿಂದ ಹೇಮರಾಜ ಬಡ್ನಿ, ಇಂಡಿಯನ್ ಲೇಬರ್ (ಅಂಬೇಡ್ಕರ್,ಪುಲೆ) ಪಕ್ಷದಿಂದ ವೇಂಕಟೇಶಪ್ರಸಾದ ಎಚ್., ಮತ್ತು ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಸಮ್ಯಕ ಪಾರ್ಟಿಯಿಂದ ವೆಂಕಟೇಶ ಆಚಾರ್ಯ ಮಣ್ಣೂರ, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶೌಕತ ಅಲಿ ಬಂಕಾಪುರ ಮತ್ತು ವೀಣಾ ಜನಗಿ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ (ಒಂದು) ಹಾಗೂ ಪಕ್ಷೇತರರಾಗಿ (ಒಂದು) ನಾಮಪತ್ರವನ್ನು ಸಲಿಸಿದ್ದಾರೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.