KarnatakaNewsNews In Kannada

ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿ; ಮಾ.7 ರಿಂದ ದೈಹಿಕ ಅರ್ಹತೆ ಹಾಗೂ ದಾಖಲೆಗಳ ಪರಿಶೀಲನೆ

ಹುಬ್ಬಳ್ಳಿ , ಮಾರ್ಚ್ 1: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈ ಹಿಂದೆ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆ, ದೈಹಿಕ ಅರ್ಹತೆ ಪರಿಶೀಲನೆಯನ್ನು ಮಾರ್ಚ್ 7 ರಿಂದ ಗೋಕುಲ ರಸ್ತೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ.

ಅಭ್ಯರ್ಥಿಗಳು ಮೂಲ ದಾಖಲೆಗಳು, ದೈಹಿಕ ಅರ್ಹತೆ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ, ಸಮಯ ಹಾಗೂ ಹಾಜರುಪಡಿಸಬೇಕಾದ ಮೂಲ ದಾಖಲೆಗಳ ವಿವರಗಳ ಕುರಿತು ಸಂಸ್ಥೆಯ ವೆಬ್‌ಸೈಟ್ www.nwkrtc.karnataka.gov.in ನಿರಂತರವಾಗಿ ಗಮನಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 7760012989 ನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Please follow and like us:

Leave a Reply

Your email address will not be published.

Back to top button
Close