NewsNews In Kannada

ಕೋವಿಡ್ 19 ಮುಂಜಾಗ್ರತಾ ಕ್ರಮಗಳ ಅರಿವು ವಾಹನಕ್ಕೆ ಚಾಲನೆ

 ಹುಬ್ಬಳ್ಳಿ, ಜ.18: ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯವು ಕೋವಿಡ್ 19 ಮುಂಜಾಗ್ರತೆಗಾಗಿ ಹಮ್ಮಿಕೊಂಡಿರುವ 10 ದಿನಗಳ ಜಾಗೃತಿಜಾಥಾ ವಾಹನಕ್ಕೆ  ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಕೋವಿಡ್, ಜಲ – ಜೀವನ ಅಭಿಯಾನ, ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಇತರೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಗಳ ಆಕರ್ಷಕ ವಿನ್ಯಾಸಗಳನ್ನು ಈ ವಾಹನ ಹೊಂದಿದೆ.

  ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಹರ್ಲಾಪುರದ ಎಸ್.ಎಸ್.ಹಿರೇಮಠ ನೇತೃತ್ವದ ಸಿವೈಸಿಡಿ  ಕಲಾತಂಡದ ಸದಸ್ಯರು  ತೆರಳಿ ಕೋವಿಡ್ 19   ಮುಂಜಾಗ್ರತಾ ಕ್ರಮಗಳು , ಲಸಿಕಾಕರಣ ಕುರಿತು ಅರಿವು ಮೂಡಿಸಲಿದ್ದಾರೆ.  ವಾಹನದಲ್ಲಿ ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆಯರು , ಜೊತೆಗೆ ತೆರಳಿ ಸ್ಥಳದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇರುತ್ತದೆ .ಗ್ರಾಮೀಣ ಭಾಗದ ಸಾರ್ವಜನಿಕರಲ್ಲಿ ಕಡ್ಡಾಯ ಮಾಸ್ಕ್ ಬಳಕೆ , ಸಾಮಾಜಿಕ ಅಂತರ ಕಾಪಾಡುವುದು , ಕೈಗಳನ್ನು ಸರಿಯಾಗಿ ತೋಳೆಯುವ ಕ್ರಮಗಳು ಮತ್ತು ಆರೋಗ್ಯ ಸಹಾಯವಾಣಿಯಂತ ಹಲವಾರು ವಿಷಯಗಳ ಕುರಿತು ಅರಿವು ಮೂಡಿಸುವ ಚಟುವಟಿಕೆಗಳು ನಡೆಯುತ್ತವೆ.

ಈ ಸಂದರ್ಭದಲ್ಲಿ ಶಾಸಕ ಜಗದೀಶ ಶೆಟ್ಟರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,  ಕೈಮಗ್ಗ,ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ಜಿಲ್ಲಾಧಿಕಾರಿ ನಿತೇಶ ಪಾಟೀಲ , ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್.ಟಿ. , ಜಿಲ್ಲಾ ಆರ್.ಸಿ.ಎಚ್.ಓ ಹಾಗೂ ಕೋವಿಡ್ ನೋಡಲ್ ಅಧಿಕಾರಿ ಎಸ್.ಎಮ್.ಹೊನಕೇರಿ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್.ಪಾತ್ರೋಟ , ಕ್ಷೇತ್ರ ಜನಸಂಪರ್ಕ ಇಲಾಖೆಯ ಮುರಳಿಧರ ಕಾರಭಾರಿ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published.

Back to top button
Close