NewsNews In KannadaNorth Karnataka

ಅಧಿಕೃತ ನಳ ಸಂಪರ್ಕ ಪಡೆಯಲು ಮನವಿ

ಹುಬ್ಬಳ್ಳಿ, ಅ.17: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಿಶ್ವಬ್ಯಾಂಕ ನೆರವಿನ ಕೆಯುಐಡಿಎಫ್ಸಿ – ಕರ್ನಾಟಕ ನೀರು ಸರಬರಾಜು ಆಧುನೀಕರಣ ಯೋಜನೆಯಡಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದ ಎಲ್ಲ ವಾರ್ಡುಗಳಿಗೆ ಒತ್ತಡ ಸಹಿತ 24/7 ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಸದರಿ ಯೋಜನೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಲೀಕತ್ವದಲ್ಲಿ ಅನುಷ್ಠಾನ ಮಾಡಲು ಮೆ: ಎಲ್ & ಟಿ ನಿರ್ವಾಹಕರಿಗೆ ಗುತ್ತಿಗೆ ನೀಡಲಾಗಿದೆ.

 

ಪ್ರಸ್ತುತ ಮೆ: ಎಲ್ & ಟಿ ನಿರ್ವಾಹಕರು ಮಧ್ಯಂತರ ನೀರು ಸರಬರಾಜಿನಿಂದ 24/7 ನಿರಂತರ ನೀರು ಸರಬರಾಜಿಗೆ ಪರಿವರ್ತನೆಗಾಗಿ ವಿತರಣಾ ಜಾಲದ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಈ ಕೆಳಗಿನ ಆಯ್ದ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ (1) ನೆಹರೂ ನಗರ (Zoಟಿe ಓo- ಊ07) (2) ಎಪಿಎಂಸಿ (Zoಟಿe ಓo- ಊ02) ಮೃತ್ಯುಂಜಯ ನಗರ (3) (Zoಟಿe ಓo-ಆ12) ಗಳಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ. ನೀರಿನ ಒತ್ತಡದ ಪರೀಕ್ಷೆ ಮಾಡಿ ಸಂಪೂರ್ಣ ವಲಯ ಕಾರ್ಯಾರಂಭ ಮಾಡುವ ಪೂರ್ವದಲ್ಲಿ ಅನಧೀಕೃತ ನಳಗಳನ್ನು ಹೊಂದಿದ ಗ್ರಾಹಕರು ತಮ್ಮ ಸೂಕ್ತ ದಾಖಲಾತಿಯೊಂದಿಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿದ ಶುಲ್ಕಗಳನ್ನು ಭರಿಸಿ, ತಮ್ಮ ನಳ ಸಂಪರ್ಕವನ್ನು ಅಧೀಕೃತಗೊಳಿಸಿಕೊಳ್ಳಲು ತಿಳಿಸಲಾಗಿದೆ.

 

ಇದಲ್ಲದೆ ಜೊತೆಯಲ್ಲಿಯೇ ಆದ್ಯತೆ ಮೇರೆಗೆ ಹಾಲಿ ಇರುವ ನೀರು ಸರಬರಾಜು ವಿತರಣಾ ಕೊಳವೆ ಜಾಲವು ಶಿಥಿಲವಾಗಿ ನೀರು ಕಲುಷಿತಗೊಳ್ಳುತ್ತಿರುವ ಪ್ರದೇಶಗಳಲ್ಲಿ 24/7 ನಿರಂತರ ನೀರು ಸರಬರಾಜು ಯೋಜನೆಯಡಿಯಲ್ಲಿ ಹೊಸ ಎಚ್.ಡಿ.ಪಿ.ಇ. (ಊಆPಇ) ಪೈಪ್ಲೈನ್ನ್ನು 24/7 ವಿನ್ಯಾಸದ ಪ್ರಕಾರ ಅಳವಡಿಸಿ ಇದರ ಮುಖಾಂತರ 4-5 ದಿನಗಳಿಗೊಮ್ಮೆ ನೀರನ್ನು ಪೂರೈಸಲು ಅಳವಡಿಸಿದ ಹೊಸ ಪೈಪಲೈನ್ಗಳ ಮೂಲಕ ಮನೆ ನಳ ಸಂಪರ್ಕಗಳನ್ನು ನೀಡಲಾಗುವುದು. ಆದ್ದರಿಂದ ಯೋಜನೆಯ ನಿರ್ವಾಹಕರಾದ ಮೆ: ಎಲ್ & ಟಿ ಗುತ್ತಿಗೆದಾರರ ಸಿಬ್ಬಂದಿ ಅನಧೀಕೃತ ನಳಗಳನ್ನು ಹೊಂದಿದ ಗ್ರಾಹಕರನ್ನು ಭೇಟಿ ಮಾಡಿದಾಗ, ಅವರಿಗೆ ಸಹಕಾರ ನೀಡಿ, ಸೂಕ್ತ ದಾಖಲಾತಿಯೊಂದಿಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿದ ಶುಲ್ಕಗಳನ್ನು ಭರಿಸಿ, ಭೇಟಿ ಮಾಡಿದ 7 ದಿನಗಳೊಳಗಾಗಿ ತಮ್ಮ ನಳ ಸಂಪರ್ಕವನ್ನು ಅಧೀಕೃತಗೊಳಿಸಿಕೊಳ್ಳುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಬಿ. ಗೋಪಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close