News In KannadaNorth Karnataka

ಯುಪಿಎಸ್‌ಸಿ ಪಾಸಾದ ಅಣ್ಣಿಗೇರಿ ಪ್ರತಿಭೆ ಸಿದ್ದಲಿಂಗಪ್ಪ

ಹುಬ್ಬಳ್ಳಿ,ಮೇ : ಅಣ್ಣಿಗೇರಿ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿ ಸಿದ್ದಲಿಂಗಪ್ಪ ಪೂಜಾರ ಎಂಬ ವಿದ್ಯಾರ್ಥಿ ಯುಪಿಎಸ್‌ಸಿ ಎಕ್ಸಾಮ್ ನಲ್ಲಿ ತೇರ್ಗಡೆಯಾಗಿ ರಾಜ್ಯಕ್ಕೆ ಮತ್ತು ಅಣ್ಣಿಗೇರಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ. 589 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದಾರೆ. ಇನ್ನೂ ಇವನ ಸಾಧನೆಗೆ ಅಣ್ಣಿಗೇರಿ ಪಟ್ಟಣವೇ ಹೆಮ್ಮೆ ಪಡುವಂತಾಗಿದೆ.

 

ತಂದೆ ಕೆಎಸ್ಸಾರ್ಟಿಸಿ ಡ್ರೈವರ್…

 

ಸಿದ್ದಲಿಂಗಪ್ಪ ಮೂಲ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ನಿವಾಸಿಯಾಗಿದ್ದು, ಬಿ ಇ‌ ಎಲೆಕ್ಟ್ರಾನಿಕ್ಸ್ ಮುಗಿಸಿ ಬೆಂಗಳೂರಿನ ಖಾಸಗಿ‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಮದುವೆಯಾಗಿರುವ ಸಿದ್ದಲಿಂಗಪ್ಪ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದಿರೋ ಸಿದ್ದಲಿಂಗಪ್ಪ ಅವರು ಬಡತನದಲ್ಲಿ ಓದಿ ದೇಶದ ಅತ್ಯುನ್ನತ ಪರೀಕ್ಷೆ ಪಾಸ್ ಮಾಡಿದ್ದಾರೆ. ನನ್ನ ಮಗ ಏನು ಓದುತ್ತಿದ್ದಾನೆಂಬುದೇ ನಮಗೆ ಗೊತ್ತಿರಲಿಲ್ಲ. ಯು.ಪಿ.ಎಸ್.ಸಿ 589 ರ್ಯಾಕ್ ಪಡೆದ ಯುವಕ ಸಿದಲಿಂಗ್ಪಪ್ಪ ತಾಯಿ ಶಾಂತವ್ವ ಮುಗ್ದ ಮನಸ್ಸಿನಿಂದ ತನ್ನ ಮನದಾಳವನ್ನು ಬಿಚ್ಚಿದ್ದಾರೆ. ದೊಡ್ಡ ಪರೀಕ್ಷೆ ಬರೆದು ನಮ್ಮ ಮಗ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ನಮ್ಮ ಮಗ ಅತ್ಯಂತ ದೊಡ್ಡ ಪರೀಕ್ಷೆಯಲ್ಲಿ ಪಾಸ ಆಗಿದ್ದಾನೆ. ಅವನು ಇಷ್ಟು ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗುತ್ತಾನೆ ಎಂದು ನಿರೀಕ್ಷೆ ಇರಲಿಲ್ಲ ಎಂದು

ಮಗನ ಸಾಧನೆ ತಾಯಿ ಖುಷಿ ಹಂಚಿಕೊಂಡಿದ್ದಾರೆ.

 

ಸಿದ್ದಲಿಂಗಪ್ಪ ಅವರದ್ದು ಬಡ ಕುಟುಂಬ ತಂದೆ ಹುಬ್ಬಳ್ಳಿ ಗ್ರಾಮೀಣ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಈಗಲೂ ತಗಡಿನ ಶೆಡ್ಡಿನ ಮನೆಯಲ್ಲಿಯೇ ವಾಸವಾಗಿದ್ದಾರೆ. ಸಿದ್ದಲಿಂಗಪ್ಪ IAS ಪಾಸ್ ಆಗಿದಕ್ಕೆ ಇಡೀ ಏರಿಯಾದ ಜನರು ಸಿದ್ದಲಿಂಗಪ್ಪ ತಾಯಿಗೆ ಸಕ್ಕರೆ ನೀಡಿ ಶುಭಾಶಯ ಕೋರಿದರು.

Please follow and like us:

Leave a Reply

Your email address will not be published.

Back to top button
Close