EducationKarnatakaNewsNews In Kannada

2 ವರ್ಷದ ಐಟಿಐ ಕೋರ್ಸ್; ಅರ್ಜಿ ಆಹ್ವಾನ

ಹುಬ್ಬಳ್ಳಿ ,ಮೇ.25: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಬೆಳಗಾವಿ ವಿಭಾಗ ವ್ಯಾಪ್ತಿಯ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 73 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು 53 ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2022-23 ನೇ ಸಾಲಿನ ಪ್ರವೇಶಕ್ಕೆ, 10 ನೇ ತರಗತಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಸಮೀಪದ ಐಟಿಐಗಳಿಗೆ ಭೇಟಿ ನೀಡಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜೂನ್ 6 ರೊಳಗಾಗಿ ಸಲ್ಲಿಸಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುವುದು, ಅಭ್ಯರ್ಥಿಯ ಅರ್ಜಿ ಸ್ವೀಕರಿಸಿದ ಮೇಲೆ ಮೆರಿಟ್ ಕಮ್ ರಿಜರ್ವೇಶನ್ ಆಧಾರದ ಮೇಲೆ ಗ್ರೆಡೇಶನ್ ಪಟ್ಟಿ ಸಿದ್ದಪಡಿಸಿ ಜೂನ್ 9 ರಿಂದ 13 ರವರೆಗೆ ಜಿಲ್ಲಾ ನೋಡಲ್ ಕೇಂದ್ರಗಳಲ್ಲಿ ಪ್ರವೇಶ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ,ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ,ಕುವೆಂಪು ರಸ್ತೆ,ನವನಗರ,ಹುಬ್ಬಳ್ಳಿ ಕಚೇರಿಗೆ ಭೇಟಿ ನೀಡಬಹುದು, ದೂರವಾಣಿ 08362225342 ಸಂಪರ್ಕಿಸಬಹುದು ಇಲ್ಲವೇ, ಸಮೀಪದ ಸರ್ಕಾರಿ, ಅನುದಾನಿತ ಐಟಿಐಗಳಿಗೆ ಭೇಟಿ ನೀಡಬಹುದು ಎಂದು ಬೆಳಗಾವಿ ವಿಭಾಗೀಯ ಜಂಟಿ ನಿರ್ದೇಶಕ ಪಿ.ರಮೇಶ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close