NewsNews In KannadaNorth Karnataka

ಕಲಬೆರಕೆ ಅಡುಗೆ ಎಣ್ಣೆ ಮಾರಾಟ ಮಾಡುವವರ ವಿರುದ್ಧ ಕ್ರಮ

ಹುಬ್ಬಳ್ಳಿ , ಆ.3: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಜನತೆಗೆ ದೇಶಾದ್ಯಂತ ಗುಣಮಟ್ಟದ ಆಹಾರವು ದೊರಕಬೇಕೆಂಬ ಉದ್ದೇಶವನ್ನು ಹೊಂದಿದೆ. ಬೇರೆ ಕೆಲವೆಡೆ ಕಲಬೆರಕೆ ಅಡುಗೆ ಎಣ್ಣೆ ಹಾಗೂ ಆಗ್‌ಮಾರ್ಕ್ ಪರವಾನಗಿ ಪಡೆಯದೇ ಮಿಶ್ರಣ ಎಣ್ಣೆ ( Blended Oil ) ಗಳನ್ನು ಮಾರಾಟ ಮಾಡುತ್ತಿರುವ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ ಪ್ರಕಾರವ ಅಲ್ಲಲ್ಲಿ ಪ್ರಕರಣಗಳು ಕೂಡ ದಾಖಲಾಗಿರುತ್ತವೆ.

 

ತ್ರೈಮಾಸಿಕ ಸರ್ವೇಕ್ಷಣಾ ಹಾಗೂ ಜಾರಿ ಆಂದೋಲನಾ ವರದಿಗಳನ್ನು ಪರಿಶೀಲಿಸಿದಾಗ ಅಡುಗೆ ಎಣ್ಣೆಯು ಅತಿ ಹೆಚ್ಚು ಕಲಬೆರಕೆ ಮತ್ತು ಪ್ಯಾಕೆಟ್ ಮೇಲೆ ಸರಿಯಾಗಿ ಲೇಬಲ್‌ಗಳನ್ನು ಹಾಕದೇ ಇರುವುದು ಕಂಡು ಬಂದಿರುತ್ತದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಆಗಸ್ಟ್ 1 ರಿಂದ 14 ರವರೆಗೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಎಣ್ಣೆಯಲ್ಲಿ ಟ್ರಾನ್ಸಫ್ಯಾಟಿ ಆಮ್ಲ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್‌ಮಾರ್ಕ್ ಲೈಸೆನ್ಸ್ ಇರದೇ ಇರುವ ಮಲ್ಟಿಸೋರ್ಸ್ ಅಡುಗೆ ಎಣ್ಣೆ ಮತ್ತು ಪ್ಯಾಕೆಟ್ ಮಾಡದೇ ಮಾರಾಟ ಮಾಡುವವರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.

 

ಅಂಕಿತ ಅಧಿಕಾರಿಗಳ ಕಛೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ತಂಡವನ್ನು ರಚಿಸಲಾಗಿದೆ. ಆಗಸ್ಟ್ 3 ರಿಂದ 14 ರವರೆಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ಕೊಟ್ಟು ಅಡುಗೆ ಎಣ್ಣೆ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಲಾಗುವುದು. ಈಗಾಗಲೇ ನಿಷೇಧವಾಗಿರುವ ಪ್ಯಾಕ್ ಮಾಡದೇ ಅಡುಗೆ ಎಣ್ಣೆಯನ್ನು ಮಾರಾಟ ಮಾಡುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ -2006 ರ ಅಧಿನಿಯಮದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close