News

ಇನ್ನರ ವ್ಹೀಲ್ ಕ್ಲಬ್ ನಿಂದ ಬಸ್ ಶೆಲ್ಟರ್ ಲೋಕಾರ್ಪಣೆ

ಹುಬ್ಬಳ್ಳಿ: ನಗರದಲ್ಲಿರುವ  ಇನ್ನರ ವ್ಹೀಲ್ ಕ್ಲಬ್ ಗಳು  ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ  ಹಲವಾರು ಉಪಯುಕ್ತ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಅಖಿಲ ಭಾರತ ಇನ್ನರ ವ್ಹೀಲ್ ಕ್ಲಬ್ ಗಳ ಸಂಘದ ಅಧ್ಯಕ್ಷೆ ಸರೋಜ ಕಟಿಯಾರ ತಿಳಿಸಿದ್ದಾರೆ.

ಇನ್ನರ್ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ವತಿಯಿಂದ ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯ ಎದುರಿಗೆ ನಿರ್ಮಿಸಲಾದ ಬಸ್ ಶಲ್ಟರ್ ನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಇನ್ನರ ವ್ಹೀಲ್ ಕ್ಲಬ್ ಜಿಲ್ಲೆ 317  ವತಿಯಿಂದ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಎಂಟು ಕ್ಲಬ್ ಗಳು   ಕ್ರಿಯಾಶೀಲವಾಗಿದ್ದು ಇತರರಿಗೆ ಪ್ರೇರಣೀಯವಾಗಿದೆ ಎಂದು ಶ್ಲಾಘಿಸಿದರು.

ಹುಬ್ಬಳ್ಳಿ ಪಶ್ಚಿಮ ಶಾಖೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಗದ್ವಾಲ ಮಾತನಾಡಿ ವಿವಿಧ ಕ್ಷೇತ್ರಗಳ  ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರಿಗೆ ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಒದಗಿಸುವ ದೃಷ್ಟಿಯಿಂದ ಅಂದಾಜು 1.5 ಲಕ್ಷ ರೂ. ವೆಚ್ಚದಲ್ಲಿ ಈ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು  ಕಾರ್ಯಕ್ರಮ ಗಳನ್ನು ಯೋಜಿಸಲಾಗಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published.

Back to top button
Close