NewsNews In KannadaVideos

ಅಫ್ತಾಬ್ ಕರಡಿಗುಡ್ಡ ಶೂಟೌಟ್ ಪ್ರಕರಣ: ಅರೋಪ ಪ್ರತ್ಯಾರೋಪಕ್ಕೆ ಕಮಿಷನರ್ ಪ್ರತಿಕ್ರಿಯೆ ಹೀಗಿದೆ

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ನಡೆದ ಅಫ್ತಾಬ್ ಕರಡಿಗುಡ್ಡ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಪಕ್ಕಾ ಫ್ರಿ ಪ್ಲಾನ್, ಅಂತ ಅಫ್ತಾಬ್ ನ ತಾಯಿ ಜಹರಾಬಿ ಆರೋಪಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ನಡೆದ ರೌಡಿ ಶೀಟರ್ ಅಫ್ತಾಬ್ ಕರಡಿಗುಡ್ಡ ನನ್ನು ಬಂಧನ ಮಾಡಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಅಂತ ಆತನ ಕಾಲಿಗೆ ಗುಂಡು ಹೊಡೆದು ಬಂಧನ ಮಾಡಿರುವುದಾಗಿ ಮಾದ್ಯಮದಲ್ಲಿ ಪ್ರಸಾರವಾಗಿತ್ತು. ಆದರೆ ಅಫ್ತಾಬ್ ತಾಯಿ ಇದು ಒಂದು ಷಡ್ಯಂತ್ರ ಅಂತ ಆರೋಪಿಸಿದ್ದಾರೆ.

ನನ್ನ ಮಗ ಒಬ್ಬ ರೌಡಿ ನಾವು ಓಪಿಕೊಳ್ಳುತ್ತೇವೆ, ಆದರೆ ನೂತನವಾಗಿ ಅಧಿಕಾರವಹಿಸಿಕೊಂಡ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್ ಬಂದ ಮೇಲೆ ನನ್ನ ಮಗ ಅವರ ಕಾರ್ಯಕ್ಕೆ ಹೆದರಿ ಯಾವುದೇ ತಂಟೆಗೆ ಹೋಗುತ್ತಿರಲಿಲ್ಲ, ಆದರೆ ಮೊನ್ನೆಯ ದಿನ ಗಾಂಜಾ ನಶೆಯಲ್ಲಿ ಬಂದ ಜಾವೂರ್ ನನ್ನ ಮಗನ ಜೊತೆ ಜಗಳವಾಡಿ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾನೆ, ಇದಕ್ಕೆ ನನ್ನ ಮಗನೂ ಕೂಡ ಆತನಿಗೆ ತಳಿಸಿದ್ದಾನೆ, ಇದಕ್ಕೆ ಸಂಬಂಧಿಸಿದಂತೆ ಕಸಬಾಪೇಟ್ ಪೊಲೀಸರು ನಮ್ಮ ಮನೆಗೆ ಬಂದು ನನ್ನ ಮಗನನ್ನು ಕರೆದ್ವದಿದ್ದಾರೆ. ಹಾಗೂ ನನ್ನ ಇನ್ನೊಬ್ಬ ಮಗನನ್ನು ಆತನ ಅಜ್ಜಿಯ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.

ಆದರೆ ಮಾಧ್ಯಮದಲ್ಲಿ ನನ್ನ ಮಗನನ್ನು ಬೇರೆ ಸ್ಥಳದಲ್ಲಿ ಬಂಧನ ಮಾಡಲು ಹೋಗಿ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಅಂತ ಅವನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಂದು ರಾತ್ರಿ ಮನೆಯಲ್ಲಿದ್ದ ನನ್ನ ಮಗನನ್ನ ಏಕಾಏಕಿ ಕರೆದೊಯ್ದು ಗ್ಯಾಂಗ್ ವಾರ್ ಹೆಸರಿನಲ್ಲಿ ಶೂಟೌಟ್ ಮಾಡಲಾಗಿದೆ.‌ ಈ ವೇಳೆ ನನ್ನ ಮಗನನ್ನ ಕರೆದೊಯ್ಯುವಾಗ ನಾವು ಎಷ್ಟೇ ಕೇಳಿಕೊಂಡರೂ ನಮ್ಮ ಕುಟುಂಬಸ್ಥರಿಗೂ ಬೆದರಿಕೆ ಹಾಕಿ ನನ್ನ ಮಗ ಅಫ್ತಾಬ್ ನನ್ನ ಎಳೆದೊಯ್ದಿದ್ದಾರೆ.‌ ಅದಾದ ನಂತರ ಆತನ‌ ಕಾಲಿಗೆ ಗುಂಡೇಟು ಹಾಕುವ ಮೂಲಕ‌ ಗ್ಯಾಂಗ್ ವಾರ್ ಕಥೆ ಕಟ್ಟಿದ್ದಾರೆ ಅಂತಾ ಅಫ್ತಾಬ್ ತಾಯಿ ಹಾಗೂ ಪತ್ನಿ‌ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಇಬ್ಬರು ಮಕ್ಕಳನ್ನು ಶೂಟ್ ಮಾಡಿ ಸಾಯಿಸಿ ಎಂದು ಆರೋಪಿಗಳ ತಂದೆ ಅಪ್ತಾಬ್ ವಿಡಿಯೋ ವೈರಲ್…

ಇದರ ನಡುವೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಮುಂದೆ ಆರೋಪಿ ಅಪ್ತಾಬ್ ತಂದೆ ಗೌಸಸಾಬ್ ಅವರು ಪರಿಪರಿಯಾಗಿ ಬೇಡಿಕೊಂಡ ವಿಡಿಯೋ ವೈರಲ್ ಆಗಿತ್ತು.  ಶೂಟ್ ಮಾಡಿದ ನಂತರ ಆರೋಪಿ ಅಪ್ತಾಭ್ ನ ಮನೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್ ಮುಂದೆ ಕಣ್ಣೀರಿ ಹಾಕುತ್ತಾ ನನ್ನ ಮಕ್ಕಳಿಬ್ಬರನ್ನು ಶೂಟ್ ಮಾಡಿ ಸಾಯಿಸಿ ಎಂದು ಅಪ್ತಾಭ್ ನ ತಂದೆ ಗೌಸಸಾಬ್ ಕಮಿಷನರ್ ಎದುರು ಬೇಡಿಕೊಂಡಿದ್ದರು.

ನನ್ನ ಮಕ್ಕಳು ನನ್ನ ಮತ್ತು ಕುಟುಂಬದ ಗೌರವವನ್ನು ಹಾಳು ಮಾಡಿದ್ದಾರೆ. ಮಕ್ಕಳು ಒಳ್ಳೆಯವರಾಗಲಿ ಎಂದು ಮದುವೆ ಮಾಡಿ,ಹೊಟೇಲ್ ಹಾಕಿಕೊಟ್ಟೆ ಸುಧಾರಣೆಯಾಗುತ್ತಿಲ್ಲ. ದುಡಿಯದೇ ಇಂತಹ ಚಟುವಟಿಕೆ ಮಾಡುತ್ತಾ ನಮ್ಮ ಗೌರವ ಹಾಳು ಮಾಡಿದ್ದಾರೆ.

ಪ್ಲೀಸ್ ಅವರಿಬ್ಬರನ್ನು ಶೂಟ್ ಮಾಡಿ ಸಾಯಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು.

ಮಗನ ಬಂಧನದ ನೋವಿಗೆ ಈತರಹ ಹೇಳಿಕೆ ನೀಡೋದು ಸರಿ ಅಲ್ಲ – ಶಶಿಕುಮಾರ್..

ಅಫ್ತಾಬ್ ತಾಯಿ ಹೇಳಿಕೆಗೆ ಪೋಲಿಸ್ ಕಮಿಷನ‌ರ್ ಅವರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಅಫ್ತಾಬ್ ನ ಮೇಲೆ ಹಿಂದೆ ಕೂಡ ಪ್ರಕರಣ ದಾಖಲಾಗಿವೆ, ಮೊನ್ನೆ ಕೂಡ ಜಾವೂ‌ರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಅವನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಆಯಾ ಸಮಯದಲ್ಲಿ ಕಾಲಿಗೆ ಗುಂಡು ಹಾರಿಸಿದ್ದೇವೆ, ಇದನ್ನ ಸಹಿಸದ ಹೆತ್ತ ಕರುಳು ಸಹಜ ರೀತಿಯಲ್ಲಿ ಮಾತನಾಡಿದ್ದಾರೆ, ಆದರೆ ಅವರ ತಂದೆಗೆ ಭೇಟಿ ಮಾಡಿದ್ದಾಗ ಅವರ ಮಗನ ಬಗ್ಗೆ ನಗನೆ ವಿವರಣೆ ನೀಡಿದ್ದಾರೆ, ಆದರೆ ಅವರ ತಾಯಿ ಪೊಲೀಸರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಮಾತು. ದುಡ್ಡು ಕೇಳುತ್ತಾರೆ ಅನ್ನೋ ವಿಚಾರಕ್ಕೆ ಹೇಳಿಕೆ ನೀಡಿರುವ ಅವರು ಯಾಕೆ ಈ ವಿಷಯ ಪೋಲಿಸ್ ಹಿರಿಯ ಅಧಿಕಾರಿಗಳ ಗಮಕ್ಕೆ ತಂದಿಲ್ಲ, ಎಂದರು.

Please follow and like us:

Leave a Reply

Your email address will not be published.

Back to top button
Close