News In KannadaNorth Karnataka

ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಪಾರ್ಸಲ್ ಕಚೇರಿಯಲ್ಲಿದ್ದ ರೂ. 8 ಲಕ್ಷ ಮೌಲ್ಯದ 480 ಮಿಕ್ಸರ್ ವಶಕ್ಕೆ : ಎಫ್.ಐ.ಆರ್ ದಾಖಲು

ಧಾರವಾಡ,ಮಾರ್ಚ್.22: ಧಾರವಾಡ ಲೋಕಸಭಾ ಕ್ಷೇತ್ರದ 72-ಹುಬ್ಬಳ್ಳಿ (ಪೂರ್ವ) ವಿಧಾನಸಭಾ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ ರೈಲ್ವೇ ನಿಲ್ದಾಣದ ರೈಲ್ವೇ ಪಾರ್ಸಲ್ ಆಫೀಸಿನಲ್ಲಿ ಅನಧಿಕೃತವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳು ಸ್ವೀಕೃತವಾಗಿರುತ್ತದೆ ಎಂದು ಚುನಾವಣಾ ಕರ್ತವ್ಯದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು ಮತ್ತು ಫೈಯಿಂಗ್ ಸ್ಕ್ಯಾಡ್ ಅಧಿಕಾರಿಗಳಿಗೆ ಮಾಹಿತಿ ಬಂದ ತಕ್ಷಣ ನಿನ್ನೆ ಸಂಜೆ ಫೈಯಿಂಗ್ ಸ್ಕ್ಯಾಡ್ ಅಧಿಕಾರಿಯಾದ ಬಸವರಾಜ ಚಿತ್ತರಗಿ ರವರು ಸ್ಥಳಕ್ಕೆ ದಾವಿಸಿ, ಪರಿಶೀಲಿಸಿದ್ದಾರೆ.

ಸದರಿ ವಸ್ತುಗಳನ್ನು ಪರಿಶೀಲಿಸಲಾಗಿ ಒಟ್ಟು 24 ರಟ್ಟಿನ ಬಾಕ್ಸ್‍ಗಳಲ್ಲಿ ಸುಮಾರು ರೂ.8 ಲಕ್ಷ ಮೌಲ್ಯದ 480 ಮಿಕ್ಸರ್‍ಗಳು ಸ್ವೀಕೃತವಾಗಿದ್ದು, ಅವುಗಳಿಗೆ ಯಾವುದೇ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡುಬಂದಿರುತ್ತದೆ.

ಸದರಿ ವಸ್ತುಗಳನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನಲೆಯಲ್ಲಿ ಮತದಾರರಿಗೆ ಉಚಿತವಾಗಿ ಹಂಚುವ ಸಲುವಾಗಿ ತರಸಿರಬಹುದು ಎಂದು ಕಂಡುಬಂದಿದ್ದರಿಂದ ಸದರಿ ವಸ್ತುಗಳನ್ನು ಸೀಜ್ ಮಾಡಿ ಹುಬ್ಬಳ್ಳಿಯ ರೈಲ್ವೇ ಪೆÇೀಲಿಸ್ ಠಾಣೆಯಲ್ಲಿ ಈIಖ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close