NewsNews In Kannada

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021 82 ವಾರ್ಡ್ ಗಳ ಫಲಿತಾಂಶ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಾರ್ವತ್ರಿಕ ಚುನಾವಣೆ-2021 ಮತಗಳ ಎಣಿಕೆ ಕಾರ್ಯ ಇಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ಜರುಗಿತು. ಎಲ್ಲ 82 ವಾರ್ಡ್‍ಗಳ ಫಲಿತಾಂಶ ಪ್ರಕಟವಾಗಿದ್ದು, 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6 ಪಕ್ಷೇತರರು ವಿಜೇತರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ವಿಜೇತ ಅಭ್ಯರ್ಥಿಗಳ ವಿವರ :     

ವಾರ್ಡ್ ನಂಬರ್ 1 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿ 2231 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಯಶ್ರೀ ರಾ. ನಾಯಕವಾಡ 2165 ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಹೊಂಗಲ 1124 ಮತಗಳನ್ನು ಪಡೆದಿದ್ದಾರೆ. 89 ನೋಟಾ ಮತಗಳು. 

ವಾರ್ಡ್ ನಂಬರ್ 2 ರಲ್ಲಿ (ಪ.ಪಂ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಸೂರವ್ವ ಬಾಳನಗೌಡ ಪಾಟೀಲ 2085 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಿಂಗವ್ವ ಹಾರಿಕೊಪ್ಪ 1996, ಜೆಡಿಎಸ್ ಅಭ್ಯರ್ಥಿ ಹೇಮಾವತಿ ಪಾಟೀಲ 767 ಹಾಗೂ ಪಕ್ಷೇತರ ಅಭ್ಯರ್ಥಿ ದೀಪಾ ಮನೋಹರ ನಾಯಕ 540 ಮತಗಳನ್ನು ಪಡೆದಿದ್ದಾರೆ. ನೋಟಾ 81 ಮತಗಳು.

ವಾರ್ಡ್ ನಂಬರ್ 3 ರಲ್ಲಿ (ಹಿಂ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ 3209 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾಹೀದ ಅಹ್ಮದ ನದಾಫ 182, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಹೂಗಾರ 1140, ಪಕ್ಷೇತರ ಅಭ್ಯರ್ಥಿಗಳಾದ ಗುರುರಾಜ ಪ್ರಭು ಸುಣಗಾರ 81, ಮಹಮೂದ ಹದ್ಲಿ 60, ದೂದಬಾದಶಾ ಬಾನಿ 6, ಮಂಜುನಾಥ ಬಾಳಪ್ಪ ನಡಟ್ಟಿ 209 ಮತಗಳನ್ನು ಪಡೆದಿದ್ದಾರೆ. ನೋಟಾ 36 ಮತಗಳು.

ವಾರ್ಡ್ ನಂಬರ್ 4 ರಲಿ ್ಲ(ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಕಮತಿ 3123 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ಪಳೋಟಿ 2274, ಜೆಡಿಎಸ್ ಅಭ್ಯರ್ಥಿ ಮುಸ್ತಾಕ ಅಹ್ಮದ ಶೇತಸನದಿ 619, ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನ ಶಲವಡಿ 54 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಸೀಫ್ ಎಚ್. ನದಾಪ 33, ಪ್ರವೀಣ ಪಾಟೀಲ 27, ರಾಕೇಶ ದೊಡ್ಡಮನಿ 229 ಹಾಗೂ ರಾಜಶೇಖರಯ್ಯ ವಿ. ಕಂತಿಮಠ 51 ಮತಗಳನ್ನು ಪಡೆದಿದ್ದಾರೆ. ನೋಟಾ 56 ಮತಗಳು. 

ವಾರ್ಡ್ ನಂಬರ್ 5 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ನಿತಿನ್ ಇಂಡಿ 2477 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿಠ್ಠಲ ಚವ್ಹಾನ 343 ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚನ್ನಗೌಡರ 1424 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಗಿರೀಶ ಸದಾಶಿವ ಗೋಡಿ 43 ಮತಗಳನ್ನು, ಎಎಪಿ ಅಭ್ಯರ್ಥಿ ನಜಿರ ಅಹಮ್ಮದ ಕುಂದಗೋಳ 34 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಭೀಮಪ್ಪ ರೆಡ್ಡಿ 17 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಸುರಜ ಮಲ್ಲಿಕಾರ್ಜುನ ಪುಡಕಲಕಟ್ಟಿ 1311 ಮತಗಳನ್ನು ಪಡೆದಿದ್ದಾರೆ.  ನೋಟಾ 57 ಮತಗಳು.

ವಾರ್ಡ್ ನಂಬರ್ 6 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ದಿಲμÁದ ಬೇಗಂ ನಧಾಫ 2737 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭೀಮವ್ವ ಆನಂದ ಮಾಳಿ 2539 ಮತಗಳನ್ನು, ಪಕ್ಷೇತರ ಅಭ್ಯರ್ಥಿಗಳಾದ ಶಾಹೀನ ಹಾವೇರಿಪೇಟ 1261 ಮತ್ತು ಯಲ್ಲಮ್ಮ ಕಡೇಮನಿ 241 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ನಾಗವ್ವ ಈಶ್ವರಪ್ಪ ಗಾಣಿಗೇರ 161 ಮತಗಳನ್ನು ಪಡೆದಿದ್ದಾರೆ. 59 ನೋಟಾ  ಮತಗಳು.

ವಾರ್ಡ್ ನಂಬರ್ 7 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ 2864 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮುಕ್ತುಮ್ ಹುಸೇನ ಮಸ್ತಾನ ವಾಲೆ 187 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮೊಹಮ್ಮದ ಮೊಯಿನ ಬಿಡಿವಾಲೆ 108 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರವಿ ಯಲಿಗಾರ 2588 ಮತಗಳನ್ನು ಪಡೆದಿದ್ದಾರೆ. ನೋಟಾ 60 ಮತಗಳು. 

ವಾರ್ಡ್ ನಂಬರ್ 8 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಶಂಕರ ಶೇಳಕೆ 2114 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಪಿರಾಜಿ ಜಾಧವ 1518 ಮತಗಳನ್ನು, ಜೆಡಿಎಸ್ ಅಭ್ಯರ್ಥಿ ಬಸವರಾಜ ಕುರಟ್ಟಿಮಠ 97 ಮತಗಳನ್ನು ಪಕ್ಷೇತರ ಅಭ್ಯರ್ಥಿ ಮಹಾಂತೇಶ್ ಕೊಡ್ಲಣ್ಣವರ 39 ಮತಗಳನ್ನು, ಎಎಪಿ ಅಭ್ಯರ್ಥಿ ಶರೀಫಸಾಬ ಮಡಕೇಶ್ವರ 52 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಬುರಾವ್ ಘಾಟಿಗೆ 1938 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಪ್ರಮೋದ ಚಿದಂಬರ ಹಂದಿಗೋಳ 51 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಭರತ ವಿಶ್ವಾಸರಾವ್ ಸಾವಂತ 77 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಮಂಜುನಾಥ ಕದಂ 238 ಮತಗಳನ್ನು, ಪಕ್ಷೇತರ ಅಭ್ಯರ್ಥಿ ರವಿಕುಮಾರ ನೀಲಕಂಠಪ್ಪ ಹೆಗಡಿ 85 ಮತಗಳನ್ನು, ಹಾಗೂ ಪಕ್ಷೇತರ ಅಭ್ಯರ್ಥಿ ಶಕುಂತಲಾ ಕೇಶವ ಕಟ್ಟಿ 43 ಮತಗಳನ್ನು ಪಡೆದಿದ್ದಾರೆ.  ನೋಟಾ 51 ಮತಗಳು 

ವಾರ್ಡ್ ನಂಬರ್ 9 ರಲ್ಲಿ (ಸಾ. ಮಹಿಳೆ) ಬಿಜೆಪಿ ಅಭ್ಯರ್ಥಿ ನಾಝರೆ ರತ್ನಬಾಯಿ ಏಕನಾಥ 1488 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀತಾ ಆ. ಅಂಕೋಲೆಕರ 1467, ಜೆಡಿಎಸ್ ಅಭ್ಯರ್ಥಿ ಮೇಘದರ್ಶಿನಿ ಈಶ್ವರ ಸಾಣಿಕೊಪ್ಪ 522 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಆರತಿ ಮಹೇಶ ಬೆಳಗಾಂವಕರ 327, ಸವಿತಾ ಬಸವರಾಜ ಕಟಗಿ 765, ಜ್ಯೋತಿ ಮೋಹನ ಮೇಲಿನಮನಿ 381, ನಾಗಮ್ಮ ವಿಜಯ ಕುಂದಗೋಳ 88, ಶಾಂತವ್ವ ಬಸಪ್ಪ ಬೂದಿಹಾಳ 146 ಮತಗಳನ್ನು ಪಡೆದಿದ್ದಾರೆ. 62 ನೋಟಾ ಮತಗಳು

ವಾರ್ಡ್ ನಂಬರ್ 10 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ)  ಬಿಜೆಪಿ ಅಭ್ಯರ್ಥಿ ಕೊಟಬಾಗಿ ಚಂದ್ರಕಲಾ ಬಸವರಾಜ 3484 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಸವದಿ 1899 ಮತಗಳು, ಜೆಡಿಎಸ್ ಅಭ್ಯರ್ಥಿ ಲತಾ ಮಂಜುನಾಥ ಆರೇರ 804 ಮತಗಳು ಹಾಗೂ ಎಎಪಿ ಅಭ್ಯರ್ಥಿ ಹಸೀನಾಬಾನು ನಿಸಾರ ಅಹ್ಮದ ಮಮದಾಪೂರ 62 ಮತಗಳನ್ನು ಪಡೆದಿದ್ದಾರೆ. 88 ನೋಟಾ ಮತಗಳು

ವಾರ್ಡ್ ನಂಬರ್ 11 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಮಂಜುನಾಥ ದುರಗಪ್ಪ ಬಟ್ಟೆಣ್ಣವರ 2593 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗುಣಬಾಯಿ ಸಂಭಾಜಿರಾವ ಬರ್ಗೆ 1090 ಮತಗಳು, ಪಕ್ಷೇತರ ಅಭ್ಯರ್ಥಿ ಜಯಪ್ರಕಾಶ್ ನರಸಿಂಹ ಗಲಗಲಿ 489 ಮತಗಳು, ಜೆಡಿಎಸ್ ಅಭ್ಯರ್ಥಿ ಸಂಜೀವ ಈಶ್ವರ ಹಿರೇಮಠ 116 ಮತಗಳು, ಕಮ್ಯೂನಿಸ್ಟ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಬಾಬೂರಾವ್ ಈಳಿಗೇರ 113 ಮತಗಳು, ಎಎಪಿ ಅಭ್ಯರ್ಥಿ ಶಿವಕಿರಣ ರಾಮಪ್ಪ ಅಗಡಿ 96 ಮತಗಳು ಹಾಗೂ ಪ್ರಜಾಕೀಯ ಅಭ್ಯರ್ಥಿ ಪ್ರಶಾಂತ ನರಸಪ್ಪಾ ದೇವಮಿತ್ರ 55 ಮತಗಳನ್ನು ಪಡೆದಿದ್ದಾರೆ.  58 ನೋಟಾ ಮತಗಳು

ವಾರ್ಡ್ ನಂಬರ್ 12 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ವಿಜಯಾನಂದ ಶೇಖರ ಶೆಟ್ಟಿ 2384 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ವಿರುಪಾಕ್ಷಪ್ಪಾ ಧಾಂವಶಿ  1191, ಜೆಡಿಎಸ್ ಅಭ್ಯರ್ಥಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ 129, ಎಎಪಿ ಅಭ್ಯರ್ಥಿ ಶಿವಕಿರಣ ರಾಮಪ್ಪ ಅಗಡಿ 100 ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರ ಬಾಬು ಪಾಟೀಲ 97 ಮತಗಳನ್ನು ಪಡೆದಿದ್ದಾರೆ. ನೋಟಾ 53 ಮತಗಳು. 

ವಾರ್ಡ್ ನಂಬರ್ 13 ರಲ್ಲಿ (ಹಿ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ಬೇದರೆ ಸುರೇಶ ಫಕ್ಕೀರಪ್ಪ 1945 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಂಬೋರೆ ರಾಜು ಶಂಕರರಾವ್ 1604 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಮಜೀದಖಾನ ರುಸ್ತುಂಖಾನ ಕಿತ್ತೂರ 767 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಹೇಮಂತ ಬಾಬು ಗುರ್ಲಹೊಸೂರ 721 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ ಜಮೀರ ಹುಸೇನ ಶಾಬುದ್ದಿನ ಮುಕ್ತಿ 19 ಮತಗಳನ್ನು ಪಡೆದಿದ್ದಾರೆ. 60 ನೋಟಾ ಮತಗಳು. 

ವಾರ್ಡ್ ನಂಬರ್ 14 ರಲ್ಲಿ (ಹಿಂ.ವರ್ಗ ‘ಬಿ’) ಕಾಂಗ್ರೆಸ್ ಅಭ್ಯರ್ಥಿ ಶಂಭುಗೌಡ ರುದ್ರಗೌಡ ಸಾಲಮನಿ 4373 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಪಿ ಅಭ್ಯರ್ಥಿ ಸುಭಾಷ ಯಲ್ಲಪ್ಪ ಶಿಂಧೆ 2222 ಮತಗಳನ್ನು ಪಡೆದಿದ್ದಾರೆ.  58 ನೋಟಾ ಮತಗಳು.

ವಾರ್ಡ್ ನಂಬರ್ 15 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ವಿಷ್ಣುತೀರ್ಥ ವೇದವ್ಯಾಸ ಕೊರ್ಲಹಳ್ಳಿ 2836 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ ದೀಪಕ ಚಿಂಚೋರೆ 1923 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶ್ರೀಧರ ಗೋಪಾಲರಾವ ಪಂಜೀಕರ 57 ಮತಗಳನ್ನು ಹಾಗೂ ಎಎಪಿ ಅಭ್ಯರ್ಥಿ ನಟರಾಜ ಶಂಕರ ನಾಶಿ 46 ಮತಗಳನ್ನು ಪಡೆದಿದ್ದಾರೆ. 65 ನೋಟಾ  ಮತಗಳು. 

ವಾರ್ಡ್ ನಂಬರ್ 16 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಪರವೀನ ದೇಸಾಯಿ 2843 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೇಶ್ವರಿ ಸಾಲಗಟ್ಟಿ 1822 ಮತಗಳನ್ನು  ಹಾಗೂ ಜೆಡಿಎಸ್ ಅಭ್ಯರ್ಥಿ ಮಂಜುಳಾ ಅನಿಲ್ ವಡೇಕರ 102 ಮತಗಳನ್ನು ಪಡೆದಿದ್ದಾರೆ. 57 ನೋಟಾ   ಮತಗಳು. 

ವಾರ್ಡ್ ನಂಬರ್ 17 ರಲ್ಲಿ (ಪ.ಪಂಗಡ) ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮ. ಮುಧೋಳ 3174 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಲ್ಲೇಶಿ ಮುಮ್ಮಿಗಟ್ಟಿ 1789 ಹಾಗೂ ಎಎಪಿ ಅಭ್ಯರ್ಥಿ ಅಮಿತ ಉಮೇಶ ವಾಲಿಕಾರ 191 ಮತಗಳನ್ನು ಪಡೆದಿದ್ದಾರೆ. 59 ನೋಟಾ ಮತಗಳು. 

ವಾರ್ಡ್ ನಂಬರ್ 18 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಶಿವು ಹಿರೇಮಠ 2624 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಪೂಜಾರ 910 ಹಾಗೂ ಜೆಡಿಎಸ್ ಅಭ್ಯರ್ಥಿ ಬಸವಂತಪ್ಪ ಉಳವಪ್ಪ ಬೆಳ್ಳಕ್ಕಿ 224 ಮತಗಳನ್ನು ಪಡೆದಿದ್ದಾರೆ. 58 ನೋಟಾ ಮತಗಳು. 

ವಾರ್ಡ್ ನಂಬರ್ 19 ರಲ್ಲಿ (ಸಾ. ಮಹಿಳೆ) ಬಿಜೆಪಿ ಅಭ್ಯರ್ಥಿ ಜ್ಯೋತಿ ಪಾಟೀಲ 2243 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೂಪಾ ಈಶ್ವರ ಒಡ್ಡಿನ 1653 ಮತಗಳನ್ನು ಪಡೆದಿದ್ದಾರೆ. ನೋಟಾ 80 ಮತಗಳು.

ವಾರ್ಡ್ ನಂಬರ್ 20 ರಲ್ಲಿ (ಪ.ಜಾ. ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಕವಿತಾ ದಾನಪ್ಪ ಕಬ್ಬೇರ 3183 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೀತಾ ಗೌಡಪ್ಪ ಪಾಟೀಲ 2504 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಶೋಭಾರಾಣಿ ಮಲ್ಲಪ್ಪ ಮಾದರ 189 ಮತಗಳನ್ನು ಪಡೆದಿದ್ದಾರೆ. ನೋಟಾ 97 ಮತಗಳು.

ವಾರ್ಡ್ ನಂಬರ್ 21 ರಲ್ಲಿ (ಹಿಂ.ವರ್ಗ ‘ಬಿ’) ಬಿಜೆಪಿ ಅಭ್ಯರ್ಥಿ ಆನಂದ ಯಾವಗಲ್ 3098 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಾನವಿ ಸಂದೀಪ 848 ಮತಗಳನ್ನು, ಜೆಡಿಎಸ್ ಅಭ್ಯರ್ಥಿ ಸುನೀಲ ತುಳಸಪ್ಪ ಕುರಹಟ್ಟಿ 484 ಮತಗಳನ್ನು ಪಕ್ಷೇತರ ಅಭ್ಯರ್ಥಿ ಮಂಜುನಾಥ ಚವ್ಹಾಣ 118 ಮತಗಳನ್ನು ಪಡೆದಿದ್ದಾರೆ.  ನೋಟಾ 98 ಮತಗಳು.

ವಾರ್ಡ್ ನಂಬರ್ 22 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಮುಲ್ಲಾ ಬಿಲಕಿಸಬಾನು 2265 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿತ್ತಲಮನಿ ಪಾರ್ವತಿ ಚಂದ್ರಶೇಖರ 1027, ಜೆಡಿಎಸ್ ಅಭ್ಯರ್ಥಿ ರಶೀದಾ ಮಹ್ಮಮದ್ ರಫೀಕ ಕಿರಶಾಳ 515, ಎಎಪಿ ಪಕ್ಷದ ಅಭ್ಯರ್ಥಿ ಮುಮೇಜಾಬೇಗಂ ಗುತ್ತಲ 107, ಪಕ್ಷೇತರ ಅಭ್ಯರ್ಥಿಗಳಾದ ಅಫ್ರೀನ ಜೆ ಅದೋನಿ 219, ನಮ್ರತಾ ಮಿಶ್ರಾ ನಂದೂರ 42, ಮಮತಾಜ ಬಾಕ್ಷರಸಾಬ ಬಳ್ಳಾರಿ 141, ಮಾಧುರಿ ಇರಾಣಿ 41, ವಹಿದಾ ದಿವಾನ ಬಳ್ಳಾರಿ 52 ಮತಗಳನ್ನು ಪಡೆದಿದ್ದಾರೆ. ನೋಟಾ 36 ಮತಗಳು.

ವಾರ್ಡ್ ನಂಬರ್ 23 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ಬಡಕುರಿ ಮಂಜುನಾಥ 2431 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಜಯ ಕಪಟಕರ 2139, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ರಾಯರ 209, ಪರಶುರಾಮ್ ಮಾನೆ  86 ಮತಗಳನ್ನು ಪಡೆದಿದ್ದಾರೆ. ನೋಟಾ 66 ಮತಗಳು.

ವಾರ್ಡ್ ನಂಬರ್ 24 ರಲ್ಲಿ (ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೊರೆ 1953 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಡವಣ್ಣನವರ ಶಿವಪ್ಪ 913, ಪಕ್ಷೇತರ ಅಭ್ಯರ್ಥಿಗಳಾದ ಸಂತೋಷ ನಂದೂರ 27, ಚಿದಾನಂದ ಸಿದ್ಧಾರೂಡ ಶಿಸನಳ್ಳಿ 575, ಪರಶುರಾಮ್ ಮಾನೆ 356, ಮಹಾವೀರ ಶಿವಣ್ಣವರ 760, ಮಂಜುನಾಥ ಕಲ್ಲಪ್ಪ ಅಂಗಡಿ 348, ಮಂಜುನಾಥ ಕುಸಗಲ್ 311 ಮತಗಳನ್ನು ಪಡೆದಿದ್ದಾರೆ. ನೋಟಾ 65 ಮತಗಳು.

ವಾರ್ಡ್ ನಂಬರ್ 25 ರಲ್ಲಿ (ಸಾ.ಮಹಿಳೆ) ಜೆಡಿಎಸ್ ಅಭ್ಯರ್ಥಿ ಲಕ್ಷ್ಮೀ ಮಾರುತಿ ಹಿಂಡಸಗೇರಿ 1678 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಆತ್ಮಾನಂದ ತಳವಾರ 1306, ಬಿಜೆಪಿ ಅಭ್ಯರ್ಥಿ ಮಂಜುಳಾ ಪರಶುರಾಮ್ ಸಾಕರೆ 882, ಪಕ್ಷೇತರ ಅಭ್ಯರ್ಥಿಗಳಾದ ಪಾರ್ವತಿ ಯಲ್ಲಪ್ಪಾ ಸುರಪುರ 29, ಸ್ಮಿತಾ ಆನಂದ ಜಾಧವ 1116 ಮತಗಳನ್ನು ಪಡೆದಿದ್ದಾರೆ. ನೋಟಾ 52 ಮತಗಳು. 

ವಾರ್ಡ್ ನಂಬರ್ 26 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ನೀಲವ್ವ ಯಲ್ಲಪ್ಪ ಅರವಳದ 2487 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಜಾಧವ 1427, ಪಕ್ಷೇತರ ಮಂಜುಳಾ ಮಾರುತಿ ಇಂಗನಳ್ಳಿ 1020, ಮಂಜುಳಾ ರವಿ ಅಕ್ಕೂರ 1523 ಮತಗಳನ್ನು ಪಡೆದಿದ್ದಾರೆ ನೋಟಾ 112 ಮತಗಳು

ವಾರ್ಡ್ ನಂಬರ್ 27 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ಸುನಿತಾ ಮಾಳವದಕರ 2184 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಾಂಚನ ಮಾಲಗಾರ 1301 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಭಾರತಿ ಡೊಳ್ಳಿನ 244 ಮತಗಳನ್ನು ಪಡೆದಿದ್ದಾರೆ. ನೋಟಾ 100 ಮತಗಳು. 

Please follow and like us:

Leave a Reply

Your email address will not be published.

Back to top button
Close