NewsNews In KannadaNorth Karnataka

ಮಾ.1 ಮತ್ತು 2ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಹುಬ್ಬಳ್ಳಿ,ಫೆ. 28: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ನೀರು ಪೂರೈಕೆಯಾಗುವ ಮಲಪ್ರಭಾ ನೀರಿನ ಮೂಲದ ಜಾಕವೆಲ್‌ದಿಂದ ಅಮ್ಮೀನಭಾವಿ ಜಲಶುದ್ದೀಕರಣ ಘಟಕಕ್ಕೆ ಪೂರೈಕೆಯಾಗುವ ಕಚ್ಚಾ ನೀರು ಪೂರೈಕೆಯ ಮುಖ್ಯ ಕೊಳವೆ ಮಾರ್ಗ ದುರಸ್ಥಿ ಕಾರ್ಯ ಹಾಗೂ ವಿದ್ಯುತ್ ಸ್ಥಾವರ ಬದಲಾವಣೆೆ ಹಾಗೂ ಇತರೆ ದುರಸ್ಥಿ ಕಾರ್ಯಗಳ ಹಿನ್ನಲೆಯಲ್ಲಿ ಮಾರ್ಚ 1 ರಂದು ದುರಸ್ಥಿ ಕಾರ್ಯ ಕೈಗೊಳ್ಳುವುದರಿಂದ ಮಾರ್ಚ 1 ಮತ್ತು 2 ರಂದು ಧಾರವಾಡ ಹಾಗೂ ಮಾರ್ಚ 1 ರಂದು ಹುಬ್ಬಳ್ಳಿ ನಗರÀಗಳಿಗೆ ನಿರಂತರ ನೀರು ಸರಬರಾಜು ಪ್ರದೇಶ ಸಹಿತ ಎಲ್ಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿಳಂಬವಾಗಿ ನೀರು ಪೂರೈಕೆ ಮಾಡಲಾಗುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಕೆಯುಐಡಿಎಫ್‌ಸಿ ಯೋಜನೆ ಅನುಷ್ಠಾನ ಘಟಕದ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

Please follow and like us:

Leave a Reply

Your email address will not be published.

Back to top button
Close