NewsVideos

ಆಮ್ಆದ್ಮಿಪಕ್ಷದ ಅಭ್ಯರ್ಥಿಗಳ ಮೇಲೆ ಬಿಜೆಪಿ ನಾಯಕರಿಂದ ಧಮ್ಕಿ: ಆರೋಪ

ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಮೇಲೆ ಬಿಜೆಪಿ ‌ಅಭ್ಯರ್ಥಿಗಳು ಧಮ್ಕಿ ಹಾಕಿ ನಾಮಪತ್ರ ವಾಪಸ್ಸು ತೆಗೆದುಕೊಳ್ಳಲು ಹಣದ ಆಮೀಷ ಒಡಿದ್ದಾರೆ ಎಂದು ಆಮ್ ಆದ್ಮಿ‌ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಗಂಭೀರ ಆರೋಪ ಮಾಡಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಕಾವು ಏರುತ್ತಿದೆ. ಇದರ ನಡುವೇ ಬಿಜೆಪಿ ಅಭ್ಯರ್ಥಿಗಳು ಎಎಪಿ ಅಭ್ಯರ್ಥಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ.  ನಾಮಪತ್ರಗಳನ್ನ ವಾಪಸ್ ಪಡೆಯುವಂತೆ ಎಎಪಿ ಅಭ್ಯರ್ಥಿಗಳ ಮೇಲೆ ಒತ್ತಡ ಹಾಗೂ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಾರ್ಡ್ ನಂಬರ್ 36 ರ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಕಾರ್ಪೋರೆಟರ್ ರಾಜಣ್ಣ ಕೊರವಿ ಅವರ ಬೆಂಬಲಿಗರು ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಧಮ್ಮಿ ಹಾಕಿದ್ದಾರೆ. ಇದಲ್ಲದೆ 38 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಮಜ್ಜಿಗೆ ಬೆಂಬಲಿಗರು ಎಎಪಿ ಅಭ್ಯರ್ಥಿ ಮಲ್ಲಪ್ಪ ತಡಸದ ಅವರಿಗೆ ನಾಮಪತ್ರ ವಾಪಸ್ಸಯ ತಗೆದುಕೊಂಡರೆ 25 ಲಕ್ಷ  ಹಣ ನೀಡುವದಾಗಿ ಕಿರುಕುಳ ನೀಡ್ತಾ ಇದ್ದಾರೆ ಎಂದು ಆರೋಪಿಸಿದ್ದಾರೆ.

ಕೇವಲ ಒಂದೇ ವಾರ್ಡ್ ಅಲ್ಲ, ಎರಡ್ಮೂರ ವಾರ್ಡ್‌ಗಳಲ್ಲಿ ಇದೇ ಸ್ಥಿತಿ ಇದ್ದು, ಈ ಕುರಿತು ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಎಎಪಿ ಪಕ್ಣದ ನಾಯಕರು ದೂರು ನೀಡಿದ್ದಾರೆ.

ಬಿಜೆಪಿ ಮುಖಂಡರಿಂದ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದ್ದು, ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ-ಧಾರವಾಡವನ್ನ ಬಿಹಾರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

Please follow and like us:

Leave a Reply

Your email address will not be published.

Back to top button
Close