NewsNews In KannadaVideos

ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದವರು ಬಂದು ಪಾಸ್ಪೋರ್ಟ್ ಮಾಡ್ಕೊಳ್ಳವರೆಗೆ ಹೋಗಿದ್ದಾರೆ ಅಂದರೆ ಇದರಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ಫೆಲ್ಯೂವರ್ ಆಗಿದೆ: ಜಿ ಪರಮೇಶ್ವರ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದವರು ನೆಲೆಯೂರಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಬಳಿ‌ ರಾವ್ ಇದೆ,ಸಿಬಿಐ ಇದೆ. ಸೆಂಟ್ರಲ್ ಏಜೆನ್ಸಿಯವರು ಈ ವಿಚಾರದಲ್ಲಿ‌ ಎಚ್ಚರಿಕೆಯಿಂದ ಇರಬೇಕು. ಪಾಕಿಸ್ತಾನದಿಂದ ಇವರು ಬೆಂಗಳೂರಿಗೆ ಹೇಗೆ ಬಂದ್ರೂ. ಇಲ್ಲಿಗೆ ಬಂದು ಪಾಸ್‌ಪೋರ್ಟ್ ಮಾಡ್ಕೊಳ್ಳವರೆಗೆ ಹೋಗಿದ್ದಾರೆ ಅಂದರೆ ಇದರಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ಫೆಲ್ಯೂವರ್ ಆಗಿದೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ನಮ್ಮ ಇಲಾಖೆಯ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಕರ್ನಾಟಕ ಪೊಲೀಸ್ ‌ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನೂ ಹಲವರಿರುವ ಮಾಹಿತಿ ಇದೆ ಹುಡುಕುತ್ತೇವೆ ಎಂದರು.

ನಮಗೂ ರಾಜಕಾರಣ ಮಾಡೋಕೆ ಬರುತ್ತೆ. ಇನ್ನು ಮುಂದೆ ನಾವೂ ರಾಜಕಾರಣ ಮಾಡ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ಮುಡಾ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪದೇ ಪದೇ ರಾಜಕಾರಣ ಮಾಡ್ತಿವೆ. ಪ್ರಕರಣ ದಾಖಲಾಗಿದೆ. ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ನಿತ್ಯ ರಾಜಕಾರಣ ಮಾಡೋದು ಸರಿಯಲ್ಲ. ಪ್ರಧಾನಿ ಮೋದಿ ಅಂಥವರು ರಾಜಕಾರಣ ಮಾಡ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರೋ ಚುನಾವಣೆಯಲ್ಲಿ ಮುಡಾ ವಿಚಾರ ಪ್ರಸ್ತಾಪಿಸೋ ಅವಶ್ಯಕತೆ ಏನು ಎಂದು ಪ್ರಶ್ನಿಸಿದರು.

ನಾನು ರಾಜೀನಾಮೆ ಕೊಡಲು ಸಿದ್ದ, ಸಿಎಂ ರಾಜೀನಾಮೆ ಕೊಡ್ತಾರಾ ಅನ್ನೋ ಅಶೋಕ್ ಹೇಳಿಕೆಗೆ ಪ್ರತಿಎ ನೀಡಿದ ಅವರು,  ಆರ್. ಅಶೋಕ್ ಮೊದಲು ರಾಜೀನಾಮೆ ಕೊಡಲಿ. ನಂತರ ಬೇಕಿದ್ದರೆ ಅದರ ಬಗ್ಗೆ ವಿಚಾರ ಮಾಡೋಣ ಎಂದು ತಿರುಗೇಟು ನೀಡಿದರು.

ಸಚಿವ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜಾರಕಿಹೊಳಿ ಅವರ ಮಗಳು ಸಂಸದೆಯಾಗಿದ್ದಾಳೆ. ಮಗಳಿಗೆ ಕ್ವಾಟರ್ಸ್ ಬೇಕು ಅನ್ನೋ ಕಾರಣಕ್ಕೆ ದೆಹಲಿಗೆ ಭೇಟಿ ನೀಡಿದ್ದರು. ಇದೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಜಮ್ಮು ಕಾಶ್ಮೀರ ಚುನಾವಣಾ ರ‌್ಯಾಲಿಯಲ್ಲಿ ಖರ್ಗೆ ಕುಸಿದು ಬಿದ್ದಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ರಾಜ್ಯಕ್ಕೆ ಕೆ.ಸಿ.ವೇಣುಗೋಪಾಲ ಭೇಟಿ ನೀಡೋ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಯಾರೇ ದೂರು‌ ನೀಡಿದರು ಕಂಪ್ಲೀಟ್ ತೆಗೆದುಕೊಂಡು‌ ತನಿಖೆ ನಡೆಸುತ್ತೇವೆ. ಅದನ್ನೇ ದ್ವೇಷದ ರಾಜಕಾರಣ ಅಂದ್ರೇ ಹೇಗೆ? ನಾವು‌ ಎಲ್ಲೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಜೆಡಿಎಸ್‌ನವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಒಂದು‌ ವಿಚಾರವಾಗಿ ದೂರು‌ ನೀಡಿದ ಮೇಲೆ ತನಿಖಾ ವರದಿಗೆ ಕಾಯಬೇಕು ಅದೂ ಸರಿಯಾದ ನಡೆ, ಅವರು ಅದನ್ನು‌ಬಿಟ್ಟು‌ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಜಿಟಿ ದೇವೆಗೌಡ  ಸಿದ್ದರಾಮಯ್ಯ ಪರ ಮೈಸೂರಿನಲ್ಲಿ ಬ್ಯಾಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಜನಪ್ರತಿನಿಧಿಗಳ ಮೇಲೆ ಎಫ್ ಐ ಅರ್ ಆದ್ದಾಗ ರಾಜೀನಾಮೆ ನೀಡುವುದ್ದಾರೆ, ಎಲ್ಲರು ನೀಡಬೇಕಾಗುತ್ತೆ ಅಂದಿದ್ದಾರೆ. ಆ ಮಾತು ಜಿಟಿ ದೇವೇಗೌಡರು ಹೇಳಿದ್ದಕ್ಕೆ ಕಾಂಗ್ರೆಸ್ ಬರ್ತಾರೆ ಅನ್ನೋದು ಸರಿಯಲ್ಲ. ಅವರು ಕಾಂಗ್ರೆಸ್ ಬರ್ತಾರೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ ಎಂದರು.

ಜಾತಿಗಣತಿ ಜಾರಿ ವಿಚಾರವನ್ನು ಕ್ಯಾಬಿನೆಟ್ ‌ನಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ‌ ಅವರು ಕೂಡ ಕ್ಯಾಬಿನೆಟ್ ‌ಗೆ ತಂದು ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಕ್ಯಾಬಿನೆಟ್ ‌ಗೆ ಬಂದ ಮೇಲೆ ಏನ್ ತೀರ್ಮಾ ಅಗುತ್ತೆ ನೋಡೋಣ. ಕಂಪ್ಲೀಟ್ ಚರ್ಚೆ ಬಳಿಕ ಸರ್ಕಾರ ಅಂತಿ‌ಮ ತೀರ್ಮಾ‌ನ ಕೈಗೊಳ್ಳತ್ತದೆ ಎಂದರು.

Please follow and like us:

Leave a Reply

Your email address will not be published.

Back to top button
Close