News In KannadaNorth Karnataka

26 ನೇ ರಾಷ್ಟ್ರೀಯ ಯುವಜನೋತ್ಸವ-2023 ಹುಬ್ಬಳ್ಳಿಯ ಈಜುಕೊಳದಲ್ಲಿ ಸ್ಕೂಬಾ ಡೈವಿಂಗ್ ಗೆ ಚಾಲನೆ

ಧಾರವಾಡ, ಜ.14: 26 ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಹುಬ್ಬಳ್ಳಿಯ ಪಾಲಿಕೆ ಈಜುಕೊಳದಲ್ಲಿ ಸ್ಕೂಬಾ ಡೈವಿಂಗ್ ಕಾರ್ಯಾಗಾರಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಅವರು ಜನೇವರಿ 13 ರಂದು ಚಾಲನೆ ನೀಡಿದರು.

ಸ್ಕೂಬಾ ಡೈವಿಂಗ್ ಗೆ ಪ್ರತಿದಿನ 21 ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಯುವ ಜನರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿರುತ್ತದೆ ಎಂದು ದಿನೇಶ ಸುವರ್ಣಾ ಅವರು ಮಾಹಿತಿ ನೀಡಿದರು.

ತರಬೇತಿದಾರರಾದ ಕರ್ನಲ್ ಆನಂದ ಸ್ವರೂಪ್ ಅವರು ಸ್ಕೂಬಾ ಡೈವಿಂಗ್ ಕುರಿತು ತರಬೇತಿ ನೀಡುತ್ತಿದ್ದಾರೆ.

Please follow and like us:

Leave a Reply

Your email address will not be published.

Back to top button
Close