NewsNews In Kannada

20 ಕೋಟಿ ವೆಚ್ಚದಲ್ಲಿ ಉಣಕಲ್ ಕೆರೆಯಿಂದ ಸಾಯಿನಗರದ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹುಬ್ಬಳ್ಳಿ, ಜ.18: 20 ಕೋಟಿ ವೆಚ್ಚದಲ್ಲಿ ಉಣಕಲ್ ಕೆರೆಯಿಂದ ಸಾಯಿನಗರದ ಕ್ರಾಸ್ ವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಕಾಮಗಾರಿ ಈ ಹಿಂದೆ ಆಗಬೇಕಿತ್ತು. ಜನರ ಬಹು ದಿನಗಳ ಆಸೆ ಈಗ ಈಡೇರುತ್ತಿದೆ.‌ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯ ಸಾಯಿನಗರದಲ್ಲಿ 20 ಕೋಟಿ ಅನುದಾನದಲ್ಲಿ ಉಣಕಲ್ ಕೆರೆಯಿಂದ ಸಾಯಿನಗರ ಕ್ರಾಸ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸೇರುವ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜನರಿಗೆ ತೊಂದರೆ ಆಗದಂತೆ ಕಾಮಗಾರಿ ಮಾಡಲಾಗುತ್ತಿದೆ. ಗಬ್ಬೂರನಿಂದ ನರೇಂದ್ರವರೆಗಿನ ಬೈಪಾಸ್ ರಸ್ತೆಯನ್ನು 6 ಪಥ ಮಾಡಲಾಗುವುದು. ಆದರೆ ಈ ಬೈಪಾಸ್ ಗೆ

ಟೋಲ್ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಹುಬ್ಬಳ್ಳಿ ಧಾರವಾಡ ನಡುವೆ ನಿರಾಳವಾಗಿ ಸಂಚಾರ ಮಾಡಬಹುದು. ಬೈಪಾಸ್ ರಸ್ತೆಯ ಟೆಂಡರ್ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು‌ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಉಣಕಲ್ ಕ್ರಾಸ್‌ ನಿಂದ ಸಾಯಿನಗರ ವೃತ್ತ, ಚರ್ಚ ರಸ್ತೆ, ಪ್ರೆಸಿಡೆಂಟ್ ಹೋಟೆಲ್ ವರೆಗೆ ಮತ್ತು ಹೆಬ್ಬಳ್ಳಿ ರೈಲ್ವೆ ಗೇಟ್ ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು. ರಸ್ತೆ ಅಗಲೀಕರಣ ಆಗುವುದರಿಂದ ಜನರು ಸಹಕಾರ ನೀಡಬೇಕು. ಎಲ್ಲ ಮೂಲಭೂತ ಸೌಕರ್ಯಗಳನ್ನು ದೊರೆಯುವಂತೆ ಮಾಡಲಾಗುವುದು. ರಿಂಗ್ ರೋಡ್ ಕಾಮಗಾರಿಗಳು ಮುಗಿದಿವೆ. ಪ್ಲೈ ಓವರ್ ಕಾಮಗಾರಿಗಳು ನಡೆಯುತ್ತಿವೆ. 24*7 ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜನರ ಸಹಕಾರ ಅವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಮಾಜಿ ಮಹಾಪೌರರಾದ ಅಶ್ವಿನಿ ಮಜ್ಜಗಿ, ಈಶ್ವರಗೌಡ ಪಾಟೀಲ,

ಚನ್ನು ಪಾಟೀಲ, ಮಾಲತೇಶ ನೀಲಣ್ಣವರ, ಶಿವು ಪಾಟೀಲ್, ಬಾಬು ವಟಗಿ, ಕಲ್ಲಪ್ಪ ಬಾದಾಮಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published.

Back to top button
Close