NewsNews In KannadaNorth Karnataka

ಹೊಸ ನಳ ಸಂಪರ್ಕ ಪಡೆಯಲು ಸಾರ್ವಜನಿಕರಿಗೆ ಅವಕಾಶ

ಹುಬ್ಬಳ್ಳಿ, ನ.17: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಹೊಸ ನಳ ಸಂಪರ್ಕ ಪಡೆಯಲು ಪಾಲಿಕೆಯ ವಲಯ ಕಛೇರಿಗಳಲ್ಲಿ ಅರ್ಜಿಯನ್ನು ಪಡೆದು ಸಂಬಧಿಸಿದ ದಾಖಲಾತಿಗಳೊಂದಿಗೆ ಆಯಾ ವಲಯ ಕಛೇರಿಗಳಿಗೆ ಸಲ್ಲಿಸಬೇಕು.

ಅರ್ಜಿಗಳನ್ನು ಎಲ್ & ಟಿ ನಿರ್ವಾಹಕರು, ಯೋಜನಾ ಸಮಾಲೋಚಕರು ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದಿ ಪರಿಶೀಲಿಸಿ ಕರ್ನಾಟಕ ಸರ್ಕಾರ ನಿಗದಿಪಡಿಸಿದ ನಳ ಸಂಪರ್ಕ ಶುಲ್ಕಗಳನ್ನು ದಾಖಲಿಸಿ, ಸಂಬಧಿಸಿದ ವಲಯ ಕಛೇರಿಗಳಿಗೆ ಸಲ್ಲಿಸುವರು. ಗ್ರಾಹಕರು ಸಂಬಧಿಸಿದ ರಸ್ತೆ ಅಗೆತದ ವೆಚ್ಚವನ್ನು ಮಹಾನಗರ ಪಾಲಿಕೆಯ ವಲಯ ಕಛೇರಿಯಲ್ಲಿ ಹಾಗೂ ನಳ ಸಂಪರ್ಕ ವೆಚ್ಚದ ಚಲನ್ ಮೊತ್ತವನ್ನು ಹುಬ್ಬಳ್ಳಿ-ಧಾರವಾಡ 1 (ಒನ್) ರಲ್ಲಿ ಪಾವತಿಸಬೇಕು. ಪಾವತಿಸಿದ ಮೊತ್ತದ ರಸೀದಿಯನ್ನು ಪಡೆದು ಮಹಾನಗರ ಪಾಲಿಕೆ ವಲಯ ಆಯುಕ್ತರ ಕಛೇರಿಗಳಲ್ಲಿ ಸಲ್ಲಿಸಬೇಕು.

ಮಹಾನಗರ ಪಾಲಿಕೆಯಿಂದ ನಳ ಸಂಪರ್ಕಕ್ಕೆ ಹೊಸ ಆರ್. ಆರ್. ನಂಬರ್‌ನ್ನು ನಿಗದಿಪಡಿಸಿದ ನಂತರ ಎಲ್ & ಟಿ ಗುತ್ತಿಗೆದಾರರಿಗೆ ತಿಳಿಸಲಾಗುತ್ತದೆ. ನಳ ಸಂಪರ್ಕವನ್ನು 7 ದಿನಗಳೊಳಗಾಗಿ ನೀಡಿ, ನಳ ಸಂಪರ್ಕ ನೀಡಿದ ದಿನಾಂಕವನ್ನು ಗ್ರಾಹಕರ ಡಾಟಾಬೇಸ್‌ನಲ್ಲಿ ದಾಖಲಿಸಿ, ಮಾಸಿಕ ನೀರಿನ ಬಿಲ್ಲುಗಳನ್ನು ಗ್ರಾಹಕರಿಗೆ ವಿತರಿಸುವರು. ಹೊಸ ನಳ ಸಂಪರ್ಕವನ್ನು ಸಾರ್ವಜನಿಕರು ಶೀಘ್ರದಲ್ಲಿ ಪಡೆದುಕೊಳ್ಳಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close