NewsNews In KannadaNorth Karnataka

ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಅವಕಾಶಗಳಿವೆ ನಿರಂತರ ಪ್ರಯತ್ನ ಮುಖ್ಯ-ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ :ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಅವಕಾಶಗಳಿವೆ. ನಿರಂತರ ಪ್ರಯತ್ನ ಮುಖ್ಯ. ಓದು ನಿರಂತರವಾಗಿರಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಲೂರು ವೆಂಕಟರಾವ ಭವನದಲ್ಲಿ ಇಂದು ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ವೃತ್ತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಧನಾತ್ಮಕ ಭಾವನೆಯನ್ನು ಹೊಂದಬೇಕು ಅಂದಾಗ ಮಾತ್ರ ಏನನ್ನಾದರೂ ಸಾಧಿಸಬಹುದು. ತಾಳ್ಮೆ ಎಲ್ಲರಲ್ಲೂ ಇರಬೇಕು. ಇಚ್ಛಾಶಕ್ತಿಯಿಂದ ಪರಿಶ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಗುರಿ ತಲುಪುವವರೆಗೂ ತಪಸ್ಸಿನಂತೆ ಆಳವಾದ ಅಧ್ಯಯನ ಮಾಡಬೇಕು. ಸಣ್ಣ ಒಂದು ಬೀಜವನ್ನು ಬಿತ್ತಿದರೆ ಅದು ಬೆಳೆದು ಹೇಗೆ ಮರವಾಗುತ್ತದೆಯೋ ಹಾಗೆ ಈ ಕಾರ್ಯಾಗಾರದಿಂದ ವಿದ್ಯಾರ್ಥಿಗಳ ಕನಸು ಚಿಗುರೊಡೆಯಲಿ. ನಿಮ್ಮ ಭವಿಷ್ಯ ಉಜ್ವಲವಾಗಲಿ. ಉತ್ತಮ ಸಾಧನೆ ಮಾಡಿ ಬೇರೆಯವರಿಗೆ ಮಾರ್ಗದರ್ಶಕರಾಗಿ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ, ಉಳಿಪೆಟ್ಟು ತಿಂದ ಕಲ್ಲು ಮೂರ್ತಿಯಾಗುತ್ತದೆ ಹಾಗೆಯೇ ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟು ಓದಬೇಕು. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ ಉಪಸ್ಥಿತರಿದ್ದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಎಚ್.ಲಮಾಣಿ ಸ್ವಾಗತಿಸಿದರು. ಅಮರಜಾನ್ ಪಿಂಜಾರ ನಿರೂಪಿಸಿದರು. ಮಂಜುನಾಥ ಚವರಡ್ಡಿ ವಂದಿಸಿದರು.

Please follow and like us:

Leave a Reply

Your email address will not be published.

Back to top button
Close