NewsNews In Kannada

ರೈತರೊಂದಿಗೆ ನಾವಿದ್ದೇವೆ; ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಧಾರವಾಡ, ಜೂನ್ 18:  ಪ್ರಧಾನಮಂತ್ರಿಗಳ ಆತ್ಮನಿರ್ಭರ, ವಿಕಸಿತ ಭಾರತ ಯೋಜನೆಗಳ ಮೂಲಕ ಸ್ವಾವಲಂಬಿ, ಸಮೃದ್ಧಿ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ನಾನು ರೈತನ ಮಗ. ರಾಜ್ಯದ ರೈತರೊಂದಿಗೆ ನಾವಿದ್ದೇವೆ ಎಂದು ಕೇಂದ್ರ ಬೃಹತ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಅವರು ಇಂದು ಸಂಜೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೇಂದ್ರ ಸರಕಾರದ ಪಿಎಂ-ಕಿಸಾನ್ ಸಮ್ಮೇಳನದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ರೈತರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ 2019 ರಲ್ಲಿ ಆರಂಭವಾಗಿದ್ದು, ಇಲ್ಲಿವರೆಗೆ ರೈತರಿಗೆ ಡಿಬಿಟಿ ಮೂಲಕ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರದಂತೆ  ವರ್ಷಕ್ಕೆ ರೂ. 6 ಸಾವಿರಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ. ಒಟ್ಟು ಇಲ್ಲಿಯವರಗೆ 16 ಕಂತುಗಳಲ್ಲಿ ಕೃಷಿ ಸಮ್ಮಾನ ಸಹಾಯಧನ ನೀಡಲಾಗಿದೆ. ಈಗ ಇಂದು 17 ನೇ ಕಂತು ಬಿಡುಗಡೆ ಮಾಡಿ, ಪ್ರಧಾನಿಗಳು ರೈತರ ಖಾತೆಗೆ ಜಮೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಧಾರವಾಡ ಜಿಲ್ಲೆಯ 1 ಲಕ್ಷಕ್ಕೂ ಹೆಚ್ಚು ರೈತರಿಗೆ ಸುಮಾರು 20 ಕೋಟಿ ಪಿಎಂ-ಕಿಸಾನ ಸಮ್ಮಾನ ಯೋಜನೆಯ ಸಹಾಯಧನ ಇಂದು ಜಮೆ ಆಗುತ್ತಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಖಿಯರಾದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರೇಣುಕಾ ಹುಬ್ಬಳ್ಳಿ, ನವಲಗುಂದ ತಾಲೂಕಿನ ಶಿಲ್ಪಾ ಹೊಸವಕ್ಕಲ, ಅಣ್ಣಿಗೇರಿ ತಾಲೂಕಿನ ಸಬಿನಾ ಬೇಗಂ, ಉತ್ತರಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ದೀಪಾ ಕಾನಮಕರ, ಹಾವೇರಿ ಜಿಲ್ಲೆಯ ಯಶೋಧಾ ಬಾರ್ಕಿ ಅವರಿಗೆ ಪ್ರಮಾಣ ಪತ್ರ ವಿತರಿಸಿ, ಸಚಿವ ಎಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದರು.

Please follow and like us:

Leave a Reply

Your email address will not be published.

Back to top button
Close