NewsNorth Karnataka

ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ 2022

ಧಾರವಾಡ, ನ 25 :ಇವರು ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ ಇಸ್ಟಿಟ್ಯೂಟ್‌ನಿಂದ ಡಿ.ಎಮ್.ಸಿ. ಎ.ಎಮ್.ಸಿ. ಮತ್ತು ಎಮ್. ಎಮ್. ಕಾಲೇಜ ಆಫ್ ವಿಜ್ಯುವಲ್ ಆಟ್‌ರ್ನಿಂದ ಬಿ.ಎಫ್.ಎ. ಪದವಿ ಪಡೆದಿದ್ದಾರೆ. ಹಲವು ವರ್ಷಗಳಿಂದ ಮುಂಬಯಿಯಲ್ಲಿ ನೆಲಸಿ ತಮ್ಮ ಕಲಾ ಪಯಣ ಮುಂದುವರಿಸಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿ ತಮ್ಮ ಮನಸ್ಸಿನಲ್ಲಿ ಉಂಟಾದ ಸಂಕೀರ್ಣ ಭಾವನೆಗಳಿಗೆ ಉತ್ತಮ ಸಂಯೋಜನೆಯಿಂದ ವಿಶಿಷ್ಟ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿ ತಮಗಾದ ಅನುಭವನಗಳನ್ನು ಅಭಿವ್ಯಕ್ತ ಗೊಳಿಸಿರುತ್ತಾರೆ. ಹಳ್ಳಿ ಮತ್ತು ನಗರ ಬದುಕಿನ ಸಂಘರ್ಷವೇ ಇವರ ಕಲಾಕೃತಿಗಳ ವಸ್ತುವಾಗಿ ಕ್ಯಾನ್‌ವಾಸ್ ಮೇಲೆ ಮೂಡಿ ಬಂದಿವೆ. ಇವರು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾಪ್ರದರ್ಶಗಳನ್ನು ಏರ್ಪಡಿಸಿ, ವಿಮರ್ಶಕರ ಹಾಗೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಪ್ರತಿಭೆಗೆ ಅನೇಕ ಗೌರವ ಸನ್ಮಾನಗಳು ಸಂದಿವೆ. ಗುಲ್ಬರ್ಗಾದಲ್ಲಿ ನಡೆದ ಕಲೋತ್ಸವ, ಮೈಸೂರು ದಸರಾ ಉತ್ಸವ, ರೋಟರಿ ಕ್ಲಬ್ ಮುಂತಾದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಹಾಗೂ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅನೇಕ ಕಲಾ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ತೋರಿದ್ದಾರೆ. ಶ್ರೀ ಸತೀಶ್ ಪಾಟೀಲ ಇವರ ಪ್ರತಿಭೆಯನ್ನು ಗುರುತಿಸಿ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ “ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ 2022” ನೀಡಿ ಗೌರವಿಸಲಾಗುತ್ತಿದೆ.

Please follow and like us:

Leave a Reply

Your email address will not be published.

Back to top button
Close