NewsNews In KannadaNorth Karnataka

ಮಳೆಯಿಂದ ಜಿಲ್ಲೆಯಲ್ಲಿ 157 ಮನೆಗಳು ಭಾಗಶಃ ಹಾನಿ; ಜನರ ಸುರಕ್ಷತೆಗೆ ನಿರಂತರ ನಿಗಾವಹಿಸಲು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಸೂಚನೆ

ಧಾರವಾಡ,ಜು.11ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಇಂದಿನ (ಜು.11)ವರೆಗೆ ಜಿಲ್ಲೆಯ ವಿವಿಧ ಪಟ್ಟಣ ಮತ್ತು ಗ್ರಾಮಗಳ ಸುಮಾರು 157 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್‌ನಿಯಮಾವಳಿ ಅನ್ವಯ ತಕ್ಷಣ ಪರಿಹಾರ ಬಿಡುಗಡೆ ಮಾಡಲು ಕ್ರಮವಹಿಸಬೇಕು. ಮತ್ತು ಜನರ ಸುರಕ್ಷತೆಗಾಗಿ ಜಿಲ್ಲಾಡಳಿತ ನಿರಂತರವಾಗಿ ನಿಗಾವಹಿಸಿ, ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ ಹಾಲಪ್ಪ ಅವರು ಸೂಚಿಸಿದ್ದಾರೆ.

ಈ ಕುರಿತು ಧಾರವಾಡ ಜಿಲ್ಲಾಡಳಿಕ್ಕೆ ನಿರ್ದೇಶನ ನೀಡಿರುವ ಅವರು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ 157 ಮನೆಗಳು ಭಾಗಶ : ಹಾನಿಯಾಗಿದ್ದು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ .

ಜಿಲ್ಲೆಯಲ್ಲಿರುವ ಅಳ್ಳಾವರ ತಾಲೂಕಿನ ಇಂದ್ರಮ್ಮನ ಕೆರೆ ಹಾಗೂ ನವಲಗುಂದ ತಾಲೂಕಿನ ಬೆಣ್ಣಿಹಳ್ಳ, ತುಪ್ಪರಿಹಳ್ಳಗಳು ಅಪಾಯ ಮಟ್ಟದಲ್ಲಿ ಇರುವುದಿಲ್ಲ.

ಬಿತ್ತನೆಯ ಬೀಜ ಗೊಬ್ಬರ ಶೇಖರಣೆ ಹಾಗೂ ವಿತರಣೆ ಸರಿಯಾಗಿ ಆಗಬೇಕು ಹಾಗೂ ಹಾನಿಗೊಳಗಾದ ಮನೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಪರಿಹಾರ ವಿತರಣೆಯಾಗಬೇಕು.

ಹಳ್ಳಕೊಳ್ಳಗಳು, ಅಪಾಯ ಮಟ್ಟದ ವಿವಿಧ ಜಲ ಮೂಲಗಳಿಂದ ಹಾನಿಯಾಗಬಹುದಾದ ಸ್ಥಳದಿಂದ ಜನರನ್ನು ಕೂಡಲೇ ಸ್ಥಳಾಂತರಗೊಳಿಸುವಂತೆ ಹಾಗೂ ಕಾಳಜಿ ಕೇಂದ್ರ ತೆರೆಯಲು ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳನ್ನು ಗುರುತಿಸಿ ಈಗಾಗಲೇ ನೇಮಿಸಲಾದ ತಾಲ್ಲೂಕ ಮಟ್ಟದ ನೋಡಲ್ ಅಧಿಕಾರಿಗಳಿಗೆ ತಹಶೀಲದಾರರೊಂದಿಗೆ ಸಮನ್ವಯ ಸಾಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಮಳೆ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಈವರೆಗೂ 52.8 : ಮಿಮೀ ವಾಡಿಕೆ ಮಳೆಗೆ 78,5 ಮಿಮಿ ಮಳೆಯಾಗಿದೆ . ಜೂನ್ ತಿಂಗಳಲ್ಲಿ 125 ಮಿ.ರ್ಮಿ ವಾಡಿಕೆ ಮಳೆಗೆ 94 ಮಿ.ಮಿ ಮಳೆಯಾಗಿದ್ದು 25 ಪ್ರತಿಶತ : ಮಳೆ ಕಡಿಮೆಯಾಗಿತ್ತು.

ಜೂನ್ ನಿಂದ ಜುಲೈ – -11 ರ ವರೆಗೆ 177 ಮಿ.ಮೀ ವಾಡಿಕೆ ಮಳೆಯಾಗಿದ್ದು ಇಲ್ಲಿಯವರೆಗೆ 172.4 ಮಿ.ಮೀ ಮಳೆಯಾಗಿದೆ. ಮುಂದಿನ 3 ದಿನಗಳವರೆಗೆ 15.5 ಮಿ.ಮಿ. ದಿಂದ 14.4 ಮಿಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ .

ಬಿತ್ತನೆ: ಮುಂಗಾರು ಹಂಗಾಮಿಗೆ 2,73.02 ಹೆಕ್ಟೇರ್ ಪದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದ್ದು, ಈ ವರೆಗೂ 261,238 ಹೆಕ್ಟೇರ್ ಪ್ರದೇಶದಲ್ಲಿ ಶೇ 95 ರಷ್ಟು ವಿವಿಧ ಕೃಷಿ ಬೆಳೆಗಳ ಬಿತ್ತನೆಯಾಗಿದೆ.

ಹತ್ತಿ, ಹೆಸರು, ಮೆಕ್ಕೆಜೋಳ, ಸೋಯಾಬೀನ, ಶೇಂಗಾ,ಉದ್ದು, ಭತ್ತ, ಕಬ್ಬು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಮೆಕ್ಕೆಜೋಳ, ಹತ್ತಿ ಹಾಗೂ ಭತ್ತದ ಬೆಳೆಗಳ ಬಿತ್ತನೆ

ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

ಬೀಜ ವಿತರಣೆ: ಧಾರವಾಡ,ಜು.11:ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ರೈತ ಸಂಪರ್ಕ ಕೇಂದ್ರ ಹಾಗೂ 14 ಹೆಚ್ಚುವರಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದ್ದು ಈವರೆಗೂ 22,350 ಕ್ವಿಂಟಲ್ ನಷ್ಟು ಬಿತ್ತನೆ ಬೀಜ ಸಂಗ್ರಹಿಸಿ, 15945 ಕ್ವಿಂಟಲ್‌ನಷ್ಟು ವಿತರಣೆ ಮಾಡಲಾಗಿದೆ.

ರಸಗೊಬ್ಬರ: ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೂ ಯೂರಿಯಾ 17,025 ಮೆ.ಟನ್ ಡಿ.ಎ.ಪಿ 13,494 ಮೆಟನ್, ಹಾಗೂ 7,735 ಮೆ.ಟನ್ ಕಾಂಪ್ಲೆಕ ಮತ್ತು ಇತರೆ ಗೊಬ್ಬರ ಸೇರಿ 38,254 ಮೆ.ಟನ್ ರಸಗೊಬ್ಬರ ಮಾರಾಟವಾಗಿದೆ.

ಪ್ರಸಕ್ತವಾಗಿ ಜಿಲ್ಲೆಯಲ್ಲಿ 4.029 ಮೆ.ಟನ್ ಯೂರಿಯಾ, 1.396 ಮೆ.ಟನ್ ಡಿಎಪಿ,, 827 ಮೆ.ಟನ್ ಎಮ್.ಓ.ಪಿ., 3,181 ಮೆ.ಟನ್ ಕಾಂಪ್ಲೆಕ್ಸ್, ಹಾಗೂ 238 ಮೆ.ಟನ್, ಎಸ್.ಎಸ್.ಪಿ . ರಸಗೊಬ್ಬರ ಒಳಗೊಂಡಂತೆ 9,672 ಮೆ.ಟನ್ ರಸಗೊಬ್ಬರ ಲಭ್ಯವಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಬೆಳೆವಿಮೆ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಲು ಎಲ್ಲಾ ಬೆಳೆಗಳಿಗೆ ಜುಲೈ 31 ಕೊನೆಯ ದಿನಾಂಕವಾಗಿದೆ . ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗೆ ಆಗ -10 ಅಂತಿಮ ದಿನಾಂಕವಾಗಿರುತ್ತದೆ .

ಈವರೆಗೆ ಜಿಲ್ಲೆಯಾದ್ಯಂತ 32.824 ರೈತರು ಫಸಲ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದು, 34,114 ಹೆಕ್ಟೇರ ಪ್ರದೇಶ ಬೆಳೆ ವಿಮೆ ಯೋಜನೆಗೆ ಒಳಪಟ್ಟಿದೆ.

ತೋಟಗಾರಿಕಾ ಬೆಳೆಗಳಾದ ಆಲೂಗಡ್ಡೆ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳನ್ನು 22.587 ಲಕ್ಷ ಹೆಕ್ಟರ ಪ್ರದೇಶದಲ್ಲಿ ಬೆಳೆಯುವ ಗುರಿ ಇದ್ದು, ಇಲ್ಲಿಯವರೆಗೆ 800 ಹೆಕ್ಟೇರ ಪ್ರದೇಶದಲ್ಲಿ ಶೇಕಡಾ 3.54 ರಷ್ಟು ಬಿತ್ತನೆಯಾಗಿದೆ. ಮತ್ತು ಬಿತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

ಮಳೆಯಿಂದಾಗಿ ಸಾರ್ವಜನಿಕರಿಗೆ, ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಅವರು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Please follow and like us:
Pin Share

Leave a Reply

Your email address will not be published.

Back to top button
Close