NewsNews In KannadaNorth Karnataka

ಭಾವೈಕ್ಯತೆ ಸಾರಿದ ಧಾರವಾಡಿಗರುಗಣೇಶ ವಿಸರ್ಜನೆ

ಧಾರವಾಡ, ಸ 09: ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಬಾಂಧವರು ಗಣೇಶನಿಗೆ ಪುಷ್ಪವೃಷ್ಟಿ ಸುರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಇಲ್ಲಿಯ ಟಿಕಾರೆ ರಸ್ತೆಯ “ಟಿಕಾರೆ ರೋಡ್ ಕಾ ರಾಜಾ” ಗಣೇಶನನ್ನು ೧೧ನೇ ದಿನವಾದ ಶುಕ್ರವಾರ ವಿಸರ್ಜನೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಟಿಕಾರೆ ರಸ್ತೆಯ ಮದನಿ ಮಸ್ಜಿದ್ ಮಾರ್ಕೆಟ್ ಯುವಕರು ಹಾಗೂ ಮುಜಮಿಲ್ ಖಾನ ಪಠಾಣ ಗೆಳೆಯರು ಬಳಗ ವತಿಯಿಂದ ಸುಮಾರು ೧೦ ನಿಮಿಷಗಳ ಕಾಲ ಸುತ್ತುಕಡೆಯಿಂದ ಪುಷ್ಪವೃಷ್ಟಿ ಸುರಿಸುತ್ತ ಗಣೇಶನ ಜಯಘೋಷ ಹಾಕಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಎಂ.ಎ. ಪಠಾಣ, ದಾವಲ ಬಿಜಾಪುರ, ಯಾಸೀನ್ ಪೇಂಟರ್ ಮುಲ್ಲಾ, ಅರ್ಬಾಜ ಖಾನ್, ಮೋಯಿನ್ ಖಾನ್, ಶಾರುಖ್ ಪಠಾಣ, ಹಫೀಜ ಖಾನ್, ರಿಯಾಜ್, ಸಮೀರ ಶೇಖ ಸೇರಿದಂತೆ ಇತರರು ಇದ್ದರು.

Please follow and like us:

Leave a Reply

Your email address will not be published.

Back to top button
Close