JobsNews

ಫೆ.8 ರಂದು ಉದ್ಯೋಗ ಮೇಳ 

ಹುಬ್ಬಳ್ಳಿ, ಫೆ.07: ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಫೆಬ್ರವರಿ 8 ರಂದು ಬೆಳಿಗ್ಗೆ 9 ಗಂಟೆಗೆ  ರಾಯಾಪುರದಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಜವಳಿ ಆಧಾರಿತ ಉದ್ದಿಮೆ ಹಾಗೂ ಗಾರ್ಮೆಂಟ್ ಕೈಗಾರಿಗಳಲ್ಲಿ ಟೈಲರ್, ಸ್ವಿನ್ನಿಂಗ್ ಮಷಿನ್ ನಿರ್ವಾಹಕರು  ಹಾಗೂ ಜವಳಿ ಉದ್ದಿಮೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳು ಲಭ್ಯವಿವೆ.

ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿ, ತರಬೇತಿ ಪ್ರಮಾಣ ಪತ್ರ ಹಾಗೂ ಇತರ ಮೂಲದಾಖಲೆಗಳ 2 ಪ್ರತಿ  ಝರಾಕ್ಸೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close