NewsNews In Kannada

ಜೂನ್ 28 ರಂದು ಸಾಗವಾನಿ ಮರಗಳ ಬಹಿರಂಗ ಹರಾಜು

ಧಾರವಾಡ, ಜೂನ್ 20:  ಧಾರವಾಡ ಶಹರ ವ್ಯಾಪ್ತಿಯ ರಸ್ತೆ ಬದಿ ಅಪಾಯಕಾರಿಯಾದ  2 ಸಾಗವಾನಿ ಮರಗಳ ತೆರುವುಗೊಳಿಸಲು ಬಹಿರಂಗ ಹರಾಜು ಮಾಡುವ ಕುರಿತು ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಜೂನ್ 28, 2024 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.

ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್‍ಗಳಲ್ಲಿ ಅಗತ್ಯ ಪಡಿಸಿರುವಂತೆ ಈ ಬಗ್ಗೆ ತಕರಾರು ಸಲ್ಲಿಸಬಯಸುವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಉಪ ವಿಭಾಗ ಧಾರವಾಡ ಹಾಗೂ ಧಾರವಾಡದ ಕೆ.ಸಿ.ಪಾರ್ಕ ಎದುರು ಅರಣ್ಯ ಸಂಕೀರ್ಣ ಮರ ಅಧಿಕಾರಿಯವರಿಗೆ ಲಿಖಿತ ರೂಪದಲ್ಲಿ ಜೂನ್ 27, 2024 ರ ಒಳಗಾಗಿ ಸಲ್ಲಿಸಬಹುದಾಗಿದೆ. ಒಂದುವೇಳೆ ನಿಗದಿತ ದಿನಾಂಕದೊಳಗೆ ತಕರಾರು ಸಲ್ಲಿಸದಿದ್ದರೆ ನಂತರ ಬಂದ ತಕರಾರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close