ಗ್ರೀನ್ ಮೊಬಿಲಿಟಿ ಕಾರಿಡಾರ್ ಲೋಕಾರ್ಪಣೆ
ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ, ಸೈಕಲ್ ಟ್ರ್ಯಾಕ್, ಪಾದಚಾರಿ ಮಾರ್ಗ, ಗೇಬಿಯನ್ ವಾಲ್, ರಿಟೇನಿಂಗ್ ವಾಲ್ ನಿರ್ಮಾಣ
ಹುಬ್ಬಳ್ಳಿ, ಮೇ.7: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದಡಿ 8 ಕೋಟಿ ರೂ.ವೆಚ್ಚದಲ್ಲಿ ಇಲ್ಲಿನ ರಾಣಿ ಚನ್ನಮ್ಮ ನಗರ ಸೇತುವೆ ಬಳಿ ನಿರ್ಮಿಸಿರುವ ಹಸಿರು ಸಂಚಾರಿ ಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್) ಮೊದಲ ಹಂತವು ಇಂದು ಲೋಕಾರ್ಪಣೆಗೊಂಡಿತು.
8 ಕೋಟಿ ರೂ.ವೆಚ್ಚದಲ್ಲಿ 630 ಮೀಟರ್ ಉದ್ದದ ಹಸಿರು ಸಂಚಾರ ಪಥ ನಿರ್ಮಿಸಲಾಗಿದೆ. 340 ಮೀಟರ್ ಉದ್ದ ಹಾಗೂ 3.5 ಮೀ . ಅಗಲದ ಸೈಕಲ್ ಟ್ರ್ಯಾಕ್ ಇದಾಗಿದೆ. ನಾಲಾದ ಎರಡೂ ಬದಿಗೆ 630 ಮೀ. ಗೇಬಿಯನ್ ವಾಲ್, 150 ಮೀ. ರಿಟೇನಿಂಗ್ ವಾಲ್,1170 ಮೀ. ನೈಸರ್ಗಿಕ ಜೈವಿಕ ಒಳಚರಂಡಿ ಮಾರ್ಗ, 0.5 ಎಂ.ಎಲ್.ಡಿ ನೈಸರ್ಗಿಕ ಚರಂಡಿ ನೀರು ಶುದ್ಧಿಕರಣ ಘಟಕ, ಒಂದು ಪಿಬಿಎಸ್ ನಿಲ್ದಾಣ, 1,000 ಚ.ಮೀ. ಲ್ಯಾಂಡ್ ಸ್ಕೇಪ್ ಮತ್ತು 340 ಚ.ಮೀ. ಹಾರ್ಡ್ ಸ್ಕೇಪ್, 340 ಮೀ. ಚೈನ್ ಲಿಂಕ್ ಫೆನ್ಸಿಂಗ್, 340 ಮೀ ಹ್ಯಾಂಡ್ ರೈಲಿಂಗ್, ಪಾದಚಾರಿ ಮಾರ್ಗ ಇಲ್ಲಿವೆ.
ಕಾರಿಡಾರ್ ಉದ್ದಕ್ಕೂ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಚಲನ ವಲನಗಳನ್ನು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ನಲ್ಲಿ ದಾಖಲಿಸಲಾಗುತ್ತದೆ. ಮಾರ್ಗದಲ್ಲಿ 39 ವಿದ್ಯುತ್ ದೀಪಗಳಿವೆ.
ಹಸಿರು ಸಂಚಾರಿ ಪಥ ಯೋಜನೆಯ 2ನೇ ಹಂತದ ಕಾಮಗಾರಿಗೆ ಭೂಮಿಪೂಜೆ 96.26 ಕೋಟಿ ರೂ.ವೆಚ್ಚದಲ್ಲಿ 5 ಕಿ.ಮೀ. ಪಥವನ್ನು ಸೇತುವೆ -2 ರಿಂದ ಕಾರವಾರ ರಸ್ತೆ ಸೇತುವೆ 12 ರವರೆಗೆ ನಿರ್ಮಿಸಲಾಗುವುದು.
3.5 ಮೀಟರ್ ಅಗಲ ವಿಸ್ತೀರ್ಣದ ಸೈಕಲ್ ಟ್ರ್ಯಾಕ್, ನಾಲಾದ ಎರಡೂ ಬದಿಗೆ 6.48 ಕಿ.ಮೀ. ಗೇಬಿಯನ್ ವಾಲ್, 1.9 ಕಿ.ಮೀ. ರಿಟೇನಿಂಗ್ ವಾಲ್ ನಿರ್ಮಿಸಲಾಗುತ್ತದೆ.
5 ಕಿ.ಮೀ. ನೈಸರ್ಗಿಕ ಒಳಚರಂಡಿ ಮಾರ್ಗ, 4 ನೈಸರ್ಗಿಕ ಜೈವಿಕ ಚರಂಡಿ ನೀರು ಶುದ್ದೀಕರಣ ಘಟಕಗಳನ್ನು ಸ್ಥಾಪಿಸಲಾಗುವುದು. 2 ಆ್ಯಂಪಿಥಿಯೇಟರ್, ಮಕ್ಕಳ 5 ಉದ್ಯಾನವನಗಳು ಹಾಗೂ ಯೋಗಕ್ಕಾಗಿ 3 ಕಡೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. 4 ಕಡೆಗಳಲ್ಲಿ ಹೊರಾಂಗಣ ವ್ಯಾಯಾಮ ಪ್ರದೇಶ, 2 ಸೌಕರ್ಯ ಕೇಂದ್ರಗಳು, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಚೈನ್ ಲಿಂಕ್ ಫೆನ್ಸಿಂಗ್ ಹಾಗೂ ಮಳೆ ನೀರಿನ ಚರಂಡಿ ನಿರ್ಮಿಸಲಾಗುತ್ತದೆ. 4 ಪಿಬಿಎಸ್ ನಿಲ್ದಾಣಗಳು, ಸುರಕ್ಷತೆಯ ದೃಷ್ಟಿಯಿಂದ ಕಾರಿಡಾರನ ಉದ್ದಕ್ಕೂ 34 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅವುಗಳನ್ನು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ನಿಂದ ನಿಯಂತ್ರಿಸಲಾಗುತ್ತದೆ. ಸೈಕಲ್ ಟ್ರ್ಯಾಕ್, ಪಾದಚಾರಿ ಮಾರ್ಗದಲ್ಲಿ ಸೌರ ವಿದ್ಯುತ್ ಚಾಲಿತ ದೀಪಗಳನ್ನು ಅಳವಡಿಸಲಾಗುತ್ತದೆ. ಲ್ಯಾಂಡ್ ಸ್ಕೇಪ್ ಮತ್ತು ಹಾರ್ಡ್ ಸ್ಕೇಪ್ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ.