ಗ್ರಾಮಲೆಕ್ಕಾಧಿಕಾರಿ ಪರ್ವೀನ ಬಾನುಗೆ ಸನ್ಮಾನ
ಹುಬ್ಬಳ್ಳಿ , ಏ. 29 : ಮುಂದೆ ಹೋಗುವವರೆಗೆ ಬೆನ್ನು ತಟ್ಟುವ ಕೆಲಸ ಮಾಡಬೇಕು. ಸಾರ್ವಜನಿಕರ ದೂರುಗಳನ್ನು ನಿವಾರಿಸುವಲ್ಲಿ ಮುಂದಾಗಬೇಕು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ ಹೇಳಿದರು.
ಹುಬ್ಬಳ್ಳಿಯ ಮಿನಿವಿಧಾನಸೌಧದ ತಹಶೀಲ್ದಾರ ಸಭಾಂಗಣದಲ್ಲಿ ಬಿ.ಕಾಂ. ಪರೀಕ್ಷೆಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ ಗ್ರಾಮಲೆಕ್ಕಾಧಿಕಾರಿ ಪರ್ವೀನಭಾನು ಸಂಶಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಲೆಕ್ಕಾಧಿಕಾರಿಗಳು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬೇಕು. ಕಠಿಣ ಶ್ರಮದಿಂದ ಪ್ರತಿಫಲ ದೊರಯಲಿದೆ. ನಿಮ್ಮ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಉಚಿತವಾಗಿ ತರಬೇತಿ ಪಡೆದು ಯಶಸ್ಸು ಪಡೆಯಬಹುದಾಗಿದೆ. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ ಎಂದು ತಿಳಿಸಿದರು.
ಅಪರ ತಹಶೀಲ್ದಾರ ಸಂತೋಷ ಹಿರೇಮಠ ಮಾತನಾಡಿ, ಅನ್ ಅಕಾಡೆಮಿಯಲ್ಲಿ ಕೆಎಎಸ್ ತರಗತಿಗಳನ್ನು ಕೇಳಿ ಪರೀಕ್ಷೆ ಎದುರಿಸಿದೆ. ಉನ್ನತ ಹುದ್ದೆಯಿಂದ ಸಾಕಷ್ಟು ಜನರಿಗೆ ಒಳ್ಳೆಯದು ಮಾಡುವ ಅಧಿಕಾರ ನಮಗೆ ಬರಲಿದೆ. ಕೆಲಸದ ನಡುವೆಯೂ ಎರಡು ಮೂರು ಗಂಟೆಗಳ ಕಾಲ ಅಧ್ಯಯನ ಮಾಡಿ, ಯಶಸ್ವಿಯಾದೆ. ಐಎಎಸ್, ಕೆಎಎಸ್ ಕೋಚಿಂಗ್ ನ್ನು ಆನ್ ಲೈನ್ ಕ್ಲಾಸ್ ಗಳ ಮೂಲಕ ಪಡೆಯಬಹುದಾಗಿದೆ. ಮೊಬೈಲ್ ನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ಜನರಿಗೆ ಸೌಲಭ್ಯ ಒದಗಿಸಿದಾಗ ಅವರಲ್ಲಿ ಕಾಣುವ ಖುಷಿ ನಮಗೆ ತೃಪ್ತಿ ನೀಡುತ್ತದೆ. ಸಂವಿಧಾನವೇ ಎಲ್ಲವನ್ನು ತಿಳಿಸಿಕೊಡುತ್ತದೆ. ನಿನ್ನೆಗಿಂತ ಮುಂದಿನ ಹೆಜ್ಜೆಗಳನ್ನು ಇಡೋಣ. ಒಳ್ಳೆಯ ವ್ಯಕ್ತಿಯಾಗಿ ಬದುಕು ಸಾಗಿಸೋಣ ಎಂದರು.
ಪರ್ವೀನಭಾನು ಸಂಶಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜಶಾಸ್ತ್ರ ವಿಷಯದಲ್ಲಿ ಎಂ.ಎ
ಮಾಡುವ ಆಸೆಯಿದೆ. ರಾಜ್ಯಪಾಲರಿಂದ ಪದಕ ಪಡೆದಿದ್ದು ಖುಷಿ ನೀಡಿತು. ಯುಪಿಎಸ್ ಸಿ ಪರೀಕ್ಷೆ ಬರೆಯುವ ಇಂಗಿತವೂ ಇದೆ ಎಂದರು.
ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉಪ ತಹಶೀಲ್ದಾರ ಹೆಚ್. ಕೋಚರಗಿ, ಶಿರಸ್ತೆದಾರರಾದ ಎ. ಎಸ್.ಪಠಾಣ, ಸಂಜೀವಕುಮಾರ್ ಶಿಲ್ಪರ್, ಎಲ್.ವಿ.ಚಕ್ರಸಾಲಿ, ಬಿ.ಆರ್. ಹೊಂಗಲ್, ಎನ್.ಎಸ್. ಚಿಕ್ಕನಗೌಡರ್, ವಿ.ಎನ್. ತಿತ್ತಿ, ರಘು ಬೊಮ್ಮನಾಳ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.
ಪ್ರಥಮ ದರ್ಜೆ ಸಹಾಯಕರಾದ ಶಿವಾನಂದ ಶಿವಳ್ಳಿಮಠ ನಿರೂಪಿಸಿ, ವಂದಿಸಿದರು.