NewsNews In Kannada
ಕೊಳವೆ ದುರಸ್ಥಿ : ಕುಡಿಯುವ ನೀರು ಸಬರಾಜಿನಲ್ಲಿ ವ್ಯತ್ಯಯ
ಹುಬ್ಬಳ್ಳಿ: ದುಮ್ಮವಾಡ ಕಚ್ಚಾ ನೀರೆತ್ತುವ ಯಂತ್ರ ಹಾಗೂ ಕಣವಿ ಹೋನ್ನಾಪುರ ಜಲಶುದ್ದೀಕರಣ ಘಟಕದ ವರೆಗಿನ ನೀರು ಸರಬರಾಜು ಕೊಳೆವೆ ಮಾರ್ಗದಲ್ಲಿ ಸೋರಿಕೆ ಕಂಡುಬಂದಿದೆ. ತುರ್ತಾಗಿ ಕೊಳವೆ ಮಾರ್ಗದ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು ಅಕ್ಟೋಬರ್ 25 ಹಾಗೂ 26 ರಂದು ಕುಡಿಯುವ ನೀರು ಸಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ.
ಹುಬ್ಬಳ್ಳಿಯ ನೆಹರು ನಗರ ವಲಯದ ವಾರ್ಡ್ ಸಂಖ್ಯೆ 31, 33, 34, ಕಾರವಾರ ರಸ್ತೆ ವಲಯದ ವಾರ್ಡ್ ಸಂಖ್ಯೆ 54, 55, 56, 60 ಹಾಗೂ ಅಯೋಧ್ಯನಗರದ ವಾರ್ಡ್ ಸಂಖ್ಯೆ 71 ರಿಂದ 80 ನೇ ವಾರ್ಡ್‌ವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ನಾಗರಿಕರು ಸಹಕರಿಸುವಂತೆ ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.