JobsNewsNews In Kannada

ಕೃಷಿ ಮಹಾವಿದ್ಯಾಲಯ: ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಧಾರವಾಡ: ಧಾರವಾಡ ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರೊಜೆಕ್ಟ್ ಅಸಿಸ್ಟಂಟ್ ಆ್ಯಂಡ್ ಅಕೌಂಟೆಂಟ್(01) ಮತ್ತು ಪ್ರೊಜೆಕ್ಟ್ ಅಸಿಸ್ಟಂಟ್ ಟೆಕ್ನಾಲಜಿ ಆ್ಯಂಡ್ ಅಡ್‍ಮಿನಿಸ್ಟ್ರೇಟಿವ್(01) ಯಾವುದೇ ಪದವಿ ಜೊತೆಗೆ ಆಡಳಿತ ಮತ್ತು ಖಾತೆಗಳಲ್ಲಿ ಮೂರು ವರ್ಷಗಳ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಗಳೊಂದಿಗೆ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳ ಮೂರು ಧೃಡಿಕರಿಸಿದ ಪ್ರತಿಗಳೊಂದಿಗೆ ಜನವರಿ 11, 2022 ರಂದು ಬೆಳಿಗ್ಗೆ 9 ರಿಂದ 11 ಗಂಟೆಯ ಒಳಗಾಗಿ ನೊಂದಣಿ, ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಧಾರವಾಡ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ರವರ ಕಛೇರಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಕೃಷಿ ಮಹಾವಿದ್ಯಾಲಯದ ಡೀನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close