NewsNews In KannadaNorth Karnataka

ಆರೋಗ್ಯ ಸಚಿವರಿಂದ ನಾಳೆ ಕಿಮ್ಸ್ ಆವರಣದಲ್ಲಿ ಚಾಲನೆಗೊಳ್ಳಲಿರುವ

10 ಹಾಸಿಗೆಯ ಐಸಿಯು ಮತ್ತು ಟೆಲಿಐಸಿಯು ಕಾರ್ಯಕ್ರಮ

ಧಾರವಾಡ, ಜ.05:ಸರಕಾರ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಮತ್ತು eಉov ಫೌಂಡೇಶನ್ ಸಹಯೋಗದಲ್ಲಿ 10ಹಾಸಿಗೆಯ ಐಸಿಯು (10BedICU)ಯೋಜನೆ ಭಾಗವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ಉತ್ತರ ಕರ್ನಾಟಕದ 10 ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕಿಸುವ ಟೆಲಿಐಸಿಯು (TeleICU) ಕ್ಲಸ್ಟರ್ ಅನ್ನು ಪ್ರಾರಂಭಿಸಲಾಗುತ್ತಿದೆ.

 

10 ಹಾಸಿಗೆಯ ಐಸಿಯು (10BedICU) ಕಾರ್ಯಕ್ರಮವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರದ ನಡುವಿನ ನೂತನ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಯೋಜನೆ ಆಗಿದೆ. ಇದನ್ನು ಕರ್ನಾಟಕದ ಇ-ಗವರ್ನಮೆಂಟ್ಸ್ ಫೌಂಡೇಶನ್ ಮತ್ತು ಕರುಣಾ ಟ್ರಸ್ಟ್ ನಿರ್ವಹಿಸಲಿವೆ. ನಾಳೆ ಜನವರಿ 6 ರಂದು ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ ಅವರು ಹೊಸ ಟೆಲಿಐಸಿಯು ಹಬ್ ಗೆ ಚಾಲನೆ ನೀಡಲಿದ್ದಾರೆ.

 

ಜಿಎಚ್ ಜಮಖಂಡಿ, ಜಿ.ಹೆಚ್ ಭಟ್ಕಳದಲ್ಲಿ 10 ತಾಲೂಕಾ ಆಸ್ಪತ್ರೆಗಳಿಗೆ ವಿಶೇಷ ಸಲಹೆ ಸೇವೆಗಳನ್ನು ಒದಗಿಸಲಿದ್ದಾರೆ. ಜಿ.ಎಚ್‌.ಯಲ್ಲಾಪುರ, ಜಿ.ಎಚ್.ನರಗುಂದ, ಎಚ್‌.ಗೋಕಾಕ, ಜಿ.ಎಚ್‌.ಸವದತ್ತಿ, ಜಿ.ಎಚ್.ಬಸವನ ಬಾಗೇವಾಡಿ, ಜಿ.ಎಚ್.ಶಿಗ್ಗಾಂವ, ಡಿ.ಎಚ್‌.ಹಾವೇರಿ, ಜಿ.ಎಚ್.ಕುಂದಗೋಳ. 2024 ರ ಜನವರಿ 6 ರಂದು ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿಯ ಕಿಮ್‌ಸ್‌ನ ಆಡಿಟೋರಿಯಂನಲ್ಲಿ ಬಿಡುಗಡೆ ನಡೆಯಲಿದೆ.

 

ಈ ಟೆಲಿಐಸಿಯು (TeleICU) ಕೇಂದ್ರವು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರಿಗೆ ದೂರದಿಂದಲೇ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಶೀಲಿಸಲು ಅನುಮತಿಸುತ್ತದೆ. 10 ಆಸ್ಪತ್ರೆಗಳಲ್ಲಿ ದಾಖಲಾದ ಯಾವುದಾದರೂ ರೋಗಿಗಳಿಗೆ ಆರೋಗ್ಯ ಸಲಹೆ ನೀಡಲು ಮತ್ತು ಈ ಐಸಿಯುಗಳಲ್ಲಿ ರೋಗಿಗಳ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಸ್ಥಳೀಯ ವೈದ್ಯರು ಮತ್ತು ದಾದಿಯರೊಂದಿಗೆ ತಜರಿ ವೈದ್ಯರು ಸಂಪರ್ಕ ಸಾಧಿಸಿ, ಸಂವಹನ ನಡೆಸುತ್ತಾರೆ.

10 ಹಾಸಿಗೆಯ ಐಸಿಯು (10BedICU) ಯೋಜನೆಯು ದೇಶದಾದ್ಯಂತ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಕ್ಲಿಷ್ಟಕರವಾದ ಆರೋಗ್ಯ ಸೇವೆಯನ್ನು ಪೂರೈಸುವಂತೆ ಮಾಡುವ ಗುರಿಯನ್ನು ಹೊಂದಿದೆ ಮತ್ತು ಪ್ರಸ್ತುತ ಸರ್ಕಾರದಲ್ಲಿ 10 ಹಾಸಿಗೆಯ ಐಸಿಯು (10BedICU) ಗಳನ್ನು ಸ್ಥಾಪಿಸಿದೆ. ದೇಶದ 9 ರಾಜ್ಯಗಳ 206 ಜಿಲ್ಲೆಗಳಲ್ಲಿ ಈ ಆಸ್ಪತ್ರೆಗಳಿವೆ.

 

ಈ ಯೋಜನೆಯು ಐದು ಘಟಕಗಳನ್ನು ಒಳಗೊಂಡಿದ್ದು, ಜಿಲ್ಲೆಯ ಇತರ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಐಸಿಯು ವೈದ್ಯಕೀಯ ಉಪಕರಣಗಳನ್ನು ಒದಗಿಸುವುದು ಮತ್ತು ಸ್ಥಾಪಿಸುವುದು ಮತ್ತು ಆಯುÁನ್ ಭಾರತ್‌ ಡಿಜಿಟಲ್ ಮಿಷನ್ ಸಂಯೋಜನೆಯೊಂದಿಗೆ ಹೆಲ್‌ತ್‌ಕೇರ್ ಪ್ಲಾಟ್‌ಫಾರ್ಮ್ ಅನ್ನು ನಿಯೋಜಿಸುವದಾಗಿದೆ.

 

ದೂರದ (10BedICU) ಆಸ್ಪತ್ರೆಗಳಿಗೆ ತಜ್ಞರನ್ನು ಸಂಪರ್ಕಿಸುವ, ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳಲ್ಲಿ (TeleICU) ಹಬ್‌ಗಳೊಂದಿಗೆ ಹಬ್-ಎನ್-ಸ್ಪೋಕ್ ಮಾದರಿಯಲ್ಲಿ ಟೆಲಿ ಐಸಿಯು (TeleICU) ವ್ಯವಸ್ಥೆಯನ್ನು ನಿಯೋಜಿಸುವದಾಗಿದೆ.

 

ವೈದ್ಯಕೀಯ ಉಪಕರಣ,ಕೆರ್ ಸಾಫ್‌ಟ್‌ವೇರ್ ಮತ್ತು ಕ್ರಿಟಿಕಲ್ ಕೇರ್ ತರಬೇತಿ ಮತ್ತು ಐಸಿಯು ಪೆಂ ಟೋಕಾಲ್‌ಗಳನ್ನು ಪ್ರಮಾಣೀಕರಿಸುವ ಕುರಿತು ಸಮಗ್ರ ತರಬೇತಿ ನೀಡುವುದು ಮತ್ತು ಯೋಜನೆಯ ಪ್ರಭಾವ ಮತ್ತು ಸಮರ್ಥನೀಯತೆಯನ್ನು ಗರಿಷ್ಠಗೊಳಿಸಲು ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಾಗಿದೆ.

 

10 ಹಾಸಿಗೆಯ ಐಸಿಯು (10BedICU) ಯೋಜನೆಯಡಿ ರಾಜ್ಯದ 41 ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ-ICUಗಳನ್ನು ಸ್ಥಾಪಿಸಿದ್ದು, ಕರ್ನಾಟಕದ ಪ್ರತಿ ಜಿಲ್ಲೆಯನ್ನು ಎರಡು ಟೆಲಿ ಐಸಿಯು (TeleICU) ಹಬ್‌ಗಳೊಂದಿಗೆ ಮೈಸೂರಿನ ಕೆಆರ್ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಳು ಕ್ರಮವಾಗಿ 13 ಮತ್ತು 10 ಸ್ಪೋಕ್ ಆಸ್ಪತ್ರೆಗಳನ್ನು ಸಂಪರ್ಕಿಸುತ್ತವೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಇನ್ನೂ ಎರಡು ಟೆಲಿಐಸಿಯು ಹಬ್‌ಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು ಕ್ರಮ ವಹಿಸಿದೆ.

 

ಈ ಯೋಜನೆಗೆ ಕ್ರಿಪೆಲ್ ಪ್ಲೇ ರಿಲೀಫ್, ಗಿವ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್, ವಿನೋದ್ ಖೋಸ್ಲಾ ಮತ್ತು ಮೈಸೂರು ಕೆಆರ್ ಆಸ್ಪತ್ರೆಯ 10ಬೆಡಿಸಿಯು ಮತ್ತು ಟೆಲಿಐಸಿಯು ಹಬ್‌ನಿಂದ ಧನಸಹಾಯವನ್ನು 10ಬೆಡಿಐಸಿಯು ಅಧ್ಯಕ್ಷರಾದ ಶ್ರೀಕಾಂತ್ ನಾದಮುನಿ ಮಾಡಿದ್ದಾರೆ. ಐಐಟಿ ಬಾಂಬೆಯಲ್ಲಿ ಇ-ಗವರ್ನಮೆಂಟ್ಸ್ ಫೌಂಡೇಶನ್, ಕರುಣಾ ಟ್ರಸ್ಟ್, ಹ್ಯಾಮಿಲ್ಟನ್ ಮೆಡಿಕಲ್, ಗೂಗಲ್ ಕೌಡ್ ಮತು ಕೊಯಿಟಾ ಸೆಂಟರ್ ಫಾರ್ ಡಿಜಿಟಲ್

ಹೆಲ್ತ್ ಸೇರಿದಂತೆ ಹಲವಾರು ಎನ್ನಿಒಗಳು ಮತ್ತು ಉದ್ಯಮ ಪಾಲುದಾರರು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಒಗ್ಗೂಡಿದ್ದಾರೆ.

Please follow and like us:

Leave a Reply

Your email address will not be published.

Back to top button
Close