NewsNews In KannadaNorth Karnataka

ಅ.29 ರಂದು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ , ಅ.28: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯೊಂದಿಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಲೋಕಸಭಾ ಕ್ಷೇತ್ರದಲ್ಲಿ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯ ಹೋಟೆಲ್ ಅನಂತ ರೆಸಿಡೆನ್ಸಿ ಕೃಷ್ಣಾ ಸಭಾಂಗಣದಲ್ಲಿಂದು ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ ಬಣ್ಣ ನಮ್ಮದು ಸೇವೆ ನಿಮ್ಮದು ವಿನೂತನ ಅಭಿಯಾನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಕ್ಷೇತ್ರದ 1,177 ಶಾಲಾ ಕಾಲೇಜುಗಳಿಗೆ ಬಣ್ಣ ಹಾಗೂ ಇತರ ಸಾಮಾಗ್ರಿಗಳನ್ನು ವಿತರಿಸಲಾಗುತ್ತದೆ. ಶಾಲೆಗಳಲ್ಲಿ ಅಧ್ಯಯನ ಮಾಡಿದವರು, ಎಸ್.ಡಿ.ಎಂ.ಸಿ ಸದಸ್ಯರು, ಸಾರ್ವಜನಿಕರು ತಮ್ಮ ಕೈಲಾದ ಸೇವೆಯನ್ನು ಶಾಲೆಗಳಿಗೆ ನೀಡಬೇಕು. ಅಕ್ಟೋಬರ್ 29 ರಂದು ಸಂಜೆ 6 ಗಂಟೆಗೆ ಕುಂದಗೋಳದ ಶ್ರೀ ಹರಭಟ್ಟ ಶಾಲಾ ಮೈದಾನದಲ್ಲಿ ಅಭಿಯಾನಕ್ಕೆ ಅಧೀಕೃತವಾಗಿ ಚಾಲನೆ ನೀಡಲಾಗುತ್ತಿದೆ. ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು ಭಾಗವಹಿಸಲಿದ್ದಾರೆ. ಅತ್ಯುತ್ತಮ ಬಣ್ಣದ ಬಳಿದ ಮೊದಲ ಮೂರು ಸ್ಥಾನ ಪಡೆದ ಶಾಲೆಗಳಿಗೆ ಬಹುಮಾನವನ್ನು ವಿತರಿಸಲಾಗುತ್ತದೆ. ರೂ. 60 ಕೋಟಿ ಅನುದಾನದಲ್ಲಿ ಈ ಅಭಿಯಾನ ಕೈಗೊಳ್ಳಲಾಗುವುದು. ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಯೋಜನೆ ಹಾಕಿಕೊಳ್ಳಲಾಗಿದೆ. 12 ತಿಂಗಳಲ್ಲಿ ಲೋಕಸಭಾ ಕ್ಷೇತ್ರದ ‌ಎಲ್ಲಾ ಶಾಲಾ ಕಾಲೇಜುಗಳಿಗೆ ಬಣ್ಣ ಬಳಿಯುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಸ್ಮಾರ್ಟ್ ಕ್ಲಾಸ್, ಡೆಸ್ಕ್ ಹಾಗೂ ಅತ್ಯಾಧುನಿಕ ಶೌಚಾಲಯಗಳನ್ನು ನಿರ್ಮಿಸಲಾಗಿರುತ್ತದೆ. 480 ಕೊಠಡಿಗಳ ಕೊರತೆಯಿದ್ದು, 160 ಕೊಠಡಿಗಳನ್ನು ಸರ್ಕಾರ ಮಂಜೂರು ಮಾಡಲಿದೆ. ಉಳಿದ 320 ಕೊಠಡಿಗಳನ್ನು ಸಿ.ಎಸ್. ಆರ್ ಅನುದಾನದ ಮೂಲಕ ನಿರ್ಮಾಣ ಮಾಡಲಾಗುವುದು. 42 ಶಾಲಾ ಕಾಲೇಜುಗಳು ಈಗಾಗಲೇ ನೋಂದಣಿಯಾಗಿವೆ ಎಂದು ಮಾಹಿತಿ ಒದಗಿಸಿದರು.

ಮುಖಂಡರಾದ ಸಂಜಯ್ ಕಪಾಟಕರ,

ಬಸವರಾಜ, ಲಿಂಗರಾಜ ಪಾಟೀಲ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Please follow and like us:

Leave a Reply

Your email address will not be published.

Back to top button
Close