News In KannadaNorth Karnataka

ಅಪರಿಚಿತ ವ್ಯಕ್ತಿ ಶವ ಪತ್ತೆ

ಧಾರವಾಡ, ಮಾ.13: ಒಬ್ಬ ಅನಾಮಧೇಯ ಪುರುಷ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 24×7 ಲೈಬ್ರರಿಯ ಹಿಂದುಗಡೆಯ ಹಳೆಯ ಬಿಲ್ಡಿಂಗ್‌ದಲ್ಲಿನ ಕೋಣೆಯಲ್ಲಿ ಮೃತಪಟ್ಟಿದ್ದು, ಆತನು ಮೃತಪಟ್ಟು ಸುಮಾರು 04-05 ದಿನಗಳಾಗಿರಬಹುದು. ಅನಾಮಧೇಯ ವ್ಯಕ್ತಿಯ ಶವ ನೋಡಿದ ಧಾರವಾಡದ ಶ್ರೀರಾಮನಗರದ ನಿವಾಸಿಯಾದ ಸಾರ್ವಜನಿಕರೊಬ್ಬರಾದ ಪರಶುರಾಮ ತಂದೆ ರಾಮು ದೊಡವಾಡ ಅವರು ಮಾ.12 ರಂದು 12-30 ಗಂಟೆಗೆ ಸಮಕ್ಷಮ ಠಾಣೆಗೆ ಹಾಜರಾಗಿ ವರದಿ ನೀಡಿರುತ್ತಾರೆ. ಮೃತ ದೇಹವು ಸಂಪೂರ್ಣವಾಗಿ ಕೊಳೆತ್ತಿರುತ್ತದೆ. ಆದರು ಕೂಡಾ ಇತನ ಮರಣದಲ್ಲಿ ತಮಗೆ ಸಂಶಯ ಇರುತ್ತದೆ. ಈ ಬಗ್ಗೆ ತಾವು ಮುಂದಿನ ಕಾನೂನು ಕ್ರಮ ಜರುಗಿಸಿ, ಎಂದು ನೀಡಿದ್ದನ್ನು ಪ್ರಕರಣ ದಾಖಲಿಸಿದಂತೆ ತನಿಖೆ ಕೈಗೊಂಡಿದ್ದು ಇರುತ್ತದೆ.

 

ಮೃತನು ಅಂದಾಜು 35-40 ವರ್ಷ, ಎತ್ತರ 5 ಫುಟ್ 8 ಇಂಚು ಎತ್ತರ, ತಲೆಯಲ್ಲಿ ಸುಮಾರು 1 ಇಂಚು ಕಪ್ಪು-ಬಿಳಿ ಕೂದಲು, ದೇಹವು ಸಂಪೂರ್ಣವಾಗಿ ಕೊಳೆತ್ತಿದ್ದು ಮುಖವು ಗುರ್ತು ಹತ್ತಿರುವುದಿಲ್ಲ. ಬಲ ಕಾಲಿನ ಹೆಬ್ಬೆರಳು ಇರುವುದಿಲ್ಲ, ಮೈಮೇಲೆ ಬಿಳಿ ಕಪ್ಪು ಬಣ್ಣದ ಚಕ್ಸ್ ಬಣ್ಣದ ಅಂಗಿಯನ್ನು ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.

 

ಆದ್ದರಿಂದ ಅನಾಮಧೇಯ ಪುರುಷನ ಯಾರಾದರೂ ಸಂಬಂಧಿಕರಿದ್ದಲ್ಲಿ ಕೂಡಲೇ ಉಪನಗರ ಪೊಲೀಸ ಠಾಣೆಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಂಟ್ರೋಲ ರೂಂ; 0836-2233555/100 ಹಾಗೂ ಉಪನಗರ ಪೊಲೀಸ -0836-2233511/9480802033 ಸಂಪರ್ಕಿಸಬಹುದೆಂದು ಎಂದು ಧಾರವಾಡ ಉಪನಗರ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close