ಹಳಿ ತಪ್ಪಿದ್ದ ಪುಟಾಣಿ ರೈಲು

ಹುಬ್ಬಳ್ಳಿ ,ಮೇ 1:ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನ ಅಡಿಯಲ್ಲಿ ಮುಕ್ತಾಯಗೊಂಡ ಯೋಜನೆಗಳು ಇಂದು ಇಂದಿರಾ ಗಾಜಿನ ಮನೆಯಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಕಾರ್ಯಕ್ರಮದಲ್ಲಿ ಪುಟಾಣಿ ರೈಲನ್ನು ಉದ್ಘಾಟಿಸಲಾಯಿತು ಮಕ್ಕಳಿಗಾಗಿ ನಿರ್ಮಿಸಲಾದ ಪುಟಾಣಿ ರೈಲು ಉದ್ಘಾಟನೆ ವೇಳೆ ಹಳಿ ತಪ್ಪಿದ್ದರಿಂದ ಸಾರ್ವಜನಿಕರಲ್ಲಿ ಗುಸುಗುಸು ಕಾರಣವಾಯಿತು.
ಈ ಘಟನೆ ಬಳಿಕ ಅಧಿಕಾರಿಗಳನ್ನು ಸಚಿವರ ಜೋಶಿ ತರಾಟೆಗೆ ತೆಗೆದುಕೊಂಡರು ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೋಡುವುದಕ್ಕಂತೂ ಸಚಿವರು ಕಿವಿಮಾತನ್ನು ಹೇಳಿದರು ಅಲ್ಲದೆ ಮುಂದೆ ಇಂತಹ ಅವಘಡಗಳು ಸಂಭವಿಸಬಾರದು ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ವಾಯು ಸಾರಿಗೆ ಅಧ್ಯಕ್ಷ ಎ ಎಸ್ ಪಾಟೀಲ್ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಸವಿತಾ ಅಮರಶೆಟ್ಟಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ ಆರ್ ವಿಶಾಲ್ ಪೋಲಿಸ್ ಆಯುಕ್ತ ಲೋಬೊ ರಾಮ್ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ ಚಂದ್ರಶೇಖರ ಮನಗುಂಡಿ ರೂಪಾ ಶೆಟ್ಟಿ ಮುಂತಾದವರಿದ್ದರ
