NewsNorth Karnataka
ಜೂ.8ರಂದು ನವಲಗುಂದ ವಿದ್ಯುತ್ ನಿಲುಗಡೆ
ಹುಬ್ಬಳ್ಳಿ, ಜೂ.6: 110 ಕೆವಿ ನವಲಗುಂದ ವಿದ್ಯುತ್ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಜೂ.8 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನವಲಗುಂದ, ಅಳಗವಾಡಿ, ಯಮನೂರು, ಶಾನವಾಡ, ಕುಮಾರಕೊಪ್ಪ, ಇಬ್ರಾಹಿಂಪುರ, ಕಡದಳ್ಳಿ, ಅಮರಗೋಳ, ಸೋತಕ್ನಳ್ಳಿ, ಶಲವಡಿ, ಬಳ್ಳೂರು, ಚನ್ನಮ್ಮ ನೀರು ಸರಬರಾಜು ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
