NewsNews In Kannada

ಎಕ್ಸಲರೇಟ್ ಕಂಪನಿಯ ನೂತನ ಕಚೇರಿ ಉದ್ಘಾಟಿಸಿದ ಸಚಿವರು

ಹುಬ್ಬಳ್ಳಿ, ಅ 04: ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ವೇನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಕ್ಸಲರೇಟ್ ಬಹುರಾಷ್ಟ್ರೀಯ ಕಂಪನಿಯ ಸ್ಥಳೀಯ ಕಚೇರಿಯನ್ನು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಸೋಮವಾರ ಉದ್ಘಾಟಿಸಿದರು.

ದೇಶಪಾಂಡೆ ಫೌಂಡೇಶನ್ ನಲ್ಲಿ ಈ ಕಚೇರಿ ತೆರೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದ ಎರಡನೇ ಸ್ತರದ ನಗರಗಳಲ್ಲಿ ಉದ್ಯಮ ಸಂಸ್ಕೃತಿ ಬೇರೂರುವುದು ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ದೃಷ್ಟಿಯಿಂದ ಸ್ವಾಗತಾರ್ಹ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಜಗತ್ತನ್ನು ಆಳುತ್ತಿವೆ. 20 ವರ್ಷಗಳ ಅನುಭವ ಹೊಂದಿರುವ ಎಕ್ಸಲರೇಟ್ ಕಂಪನಿಯು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಯುವಜನರಿಗೆ ಸೂಕ್ತ ಉದ್ಯೋಗ ಅವಕಾಶಗಳನ್ನು ಒದಗಿಸಲಿದೆ ಎಂದು ಅವರು ನುಡಿದರು.

21ನೇ ಶತಮಾನದಲ್ಲಿ ಪರಿವರ್ತನೆಗಳು ಕ್ಷಿಪ್ರವಾಗಿ ಸಂಭವಿಸುತ್ತಿವೆ. ಎಕ್ಸಲರೇಟ್ ಕಂಪನಿಯು ಆರೋಗ್ಯ, ವಿಮೆ, ಆರ್ಥಿಕ ಸೇವೆಗಳು ಮತ್ತು ಔದ್ಯಮಿಕ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಂಪನಿಯ ಉನ್ನತಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಕ್ಯಾಪ್ಶನ್
ಎಕ್ಸಲರೇಟ್ ಕಂಪನಿಯ ನೂತನ ಕಚೇರಿಯನ್ನು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಹುಬ್ಬಳ್ಳಿಯಲ್ಲಿ ಸೋಮವಾರ ಉದ್ಘಾಟಿಸಿದರು.

Please follow and like us:
Pin Share

Leave a Reply

Your email address will not be published.

Back to top button
Close