NewsNews In Kannada

ಆರ್.ಎಸ್.ಎಸ್. ಕಛೇರಿ ಕೇಶವ ಕುಂಜಕ್ಕೆ ಬಸವರಾಜ ಹೊರಟ್ಟಿ ಭೇಟಿ: ಕುತೂಹಲ ಮೂಡಿಸಿದ ಹೊರಟ್ಟಿ ನಡೆ

ಹುಬ್ಬಳ್ಳಿ: ಹುಬ್ಬಳ್ಳಿಯ  ಆರ್.ಎಸ್.ಎಸ್. ಕಛೇರಿ ಕೇಶವ ಕುಂಜಕ್ಕೆ ಬಸವರಾಜ ಹೊರಟ್ಟಿ ಭೇಟಿ‌ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.

ಬಿಜೆಪಿಯ ಹೈಕಮಾಂಡ್ ಎಂದು ಗುರುತಿಸಿಕೊಂಡಿರುವ ಕೇಶವಕುಂಜಕ್ಕೆ ಬಸವರಾಜ ಹೊರಟ್ಟಿ ಇದೇ ಮೊದಲ ಬಾರಿ ಬೇಟಿ‌ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹುಬ್ಬಳ್ಳಿ ಪ್ರವಾಸದಲ್ಲಿದ್ದು, ಅವರವಜೊತೆಗೆ ಬಸವರಾಜ ಹೊರಟ್ಟಿ ಕೇಶವ ಕುಂಜಕ್ಕೆ ಭೇಟಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಸೇರ್ತಾರಾ ಅನ್ನೋ ಗುಮಾನಿಗೆ ಇಂಬು ನೀಡಿದಂತಾಗೊದೆ. ಆದ್ರೆ ಅಶ್ವತ್ಥ ನಾರಾಯಣ ಬಂದಿದ್ದರಿಂದ ಅವರೊಂದಿಗೆ ಹೋಗಿದ್ದುದಾಗಿ ಹೊರಟ್ಟಿ ಸಮಜಾಯಿಷಿ ನೀಡಿದ್ದಾರೆ. ಆದ್ರೆ ರಾಜಕೀಯವಾಗಿ ಹಾಗೂ ಸೈದ್ದಾಂತಿಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದ ಕಡೆ ಹೊರಟ್ಟಿ ಹೆಜ್ಜೆ ಹಾಕಿದ್ದು, ಅದರಲ್ಲೂ ವಿಧಾನ ಪರಿಷತ್ ಸಭಾಪತಿಯಾಗಿ ಆರ್ ಎಸ್ ಎಸದ ಕಚೇರಿಯಲ್ಲಿ‌ ಕಾಣಿಸಿಕೊಂಡಿದ್ದು, ಅನುಮಾನಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಆರ್.ಎಸ್.ಎಸ್. ಪ್ರಮುಖ ಶ್ರೀಧರ್ ನಾಡಿಗೇರ, ಗೋವಿಂದಪ್ಪ ಮತ್ತಿತರರ ಉಪಸ್ಥಿತರಿದ್ದರು.

Please follow and like us:
Pin Share

Leave a Reply

Your email address will not be published.

Back to top button
Close