NewsNews In Kannada

ತಾಲೂಕು ಆಡಳಿತದಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.21: ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ, ಸಮಾಜದ ಮುಖಂಡರಾದ ಗುರಪ್ಪ ಜಿಡ್ಡಿ, ಮಂಜುನಾಥ ಭೈರಣ್ಣವರ, ಮಂಜು ಗಡಿಯಣ್ಣವರ, ಯಲ್ಲಪ್ಪ ಅಳಗವಾಡಿ, ವೈ.ಆರ್. ಗೇಟಿವರು, ಎನ್.ಎಂ. ಮಡ್ಡೇರ, ಬಸಪ್ಪ ತಹಸೀಲ್ದಾರ್, ರಾಮಪ್ಪ ಗುಗ್ಗರಿ, ಶಿವಪ್ಪ ಮುದರಣ್ಣವರ, ಬಸುವರಾಜ ದಾಸನಾಯ್ಕರ, ನಿಂಗಪ್ಪ ತಿರ್ಲಾಪೂರ, ಶಿವಾನಂದ ಅಳ್ಳಣ್ಣವರ, ಕಲ್ಲಪ್ಪ ಸುಣಗಾರ, ಮೈಲಾರಿ ಬಾರಕೇರ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Please follow and like us:
Pin Share

Leave a Reply

Your email address will not be published.

Back to top button
Close