ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ 3 ವರ್ಷ ಶಿಕ್ಷೆ
ಧಾರವಾಡ, ಡಿ.04: ಧಾರವಾಡ ನಗರದ ವಿವಿದೆಡೆ 4 ಪ್ರಕರಣಗಳಲ್ಲಿ ಬಂಗಾರ ಹಾಗೂ ನಗದು ಕಳ್ಳತನಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ. ಚಂದ್ರಕಾಂತ ಅವರು ಡಿಸೆಂಬರ್ 3 ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ಧಾರವಾಡ ನಗರದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ನವಲೂರಿನ ಎಲ್.ಎಮ್.ಸಿ ಚಾಳಿನಲ್ಲಿ ವಾಸವಾಗಿರುವ ಶ್ರೀ ಮಹೇಶ ರಘು ನಾಯ್ಕ ಇವರ ಮನೆಯ ಕೀಲಿಯನ್ನು ಹಗಲು ಹೊತ್ತಿನಲ್ಲಿ ಕಳ್ಳರು ಮುರಿದು ಒಟ್ಟು 89 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 100 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ಅಂದಾಜು ಕಿಮ್ಮತ್ತು ರೂ.2,24,000/- ರಷ್ಟು ಕಳ್ಳರು ಕಳ್ಳತನ ಮಾಡಿದ್ದು ಇತ್ತು.
ಧಾರವಾಡ ನಗರದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ಕೆ.ಎಮ್.ಎಫ್. ಹತ್ತಿರ ನಂದಿನಿ ಲೇಔಟನಲ್ಲಿ ವಾಸವಾಗಿರುವ ಸತೀಶ ಸಿದ್ದಪ್ಪ ಹೆಗ್ಗಣವರ ಇವರ ಮನೆಯ ಕೀಲಿಯನ್ನು ಹಗಲು ಹೊತ್ತಿನಲ್ಲಿ ಕಳ್ಳರು ಮುರಿದು ಒಟ್ಟು 20 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 130 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ಹಾಗೂ 20,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದು ಇತ್ತು.
ಧಾರವಾಡ ನಗರದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ಕೆ.ಎಮ್.ಎಫ್. ಬಾಲತ್ರಿಪುರಸುಂದರಿ ದೇವಸ್ಥಾನದ ಹತ್ತಿರ ವಾಸವಾಗಿರುವ ಮಲ್ಲಿಕಾರ್ಜುನಯ್ಯ ಎನ್ ಅಳಗುಂಡಿಮಠ ಇವರ ಮನೆಯ ಇಂಟರ್ ಲಾಕನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 12 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 2,500 ಗ್ರಾಂ ತೂಕದ ಬೆಳ್ಳಿ ಒಡವೆ ರೂ 1,24,000/- ಅಂದಾಜು ಕಿಮ್ಮತ್ತಿನವುಗಳನ್ನು ಹಾಗೂ 3,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದು ಇತ್ತು.
ಧಾರವಾಡ ನಗರದ ಶಿವಾಜಿನಗರದಲ್ಲಿ ವಾಸವಾಗಿರುವ ಶ್ರೀ ಸುಭಾಸ ಕೃಷ್ಣಾ ಶಿಂಧೆ ಇವರ ಮನೆಯ ಕೀಲಿಯನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 142 ಗ್ರಾಂ ತೂಕದ ಬಂಗಾರದ ಒಡವೆ ರೂ 3,52,000/- ಅಂದಾಜು ಕಿಮ್ಮತ್ತಿನವುಗಳನ್ನು ಹಾಗೂ 7,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದು ಇತ್ತು.
ಧಾರವಾಡ ನಗರದ ನವಲೂರಿನ ವಿನಾಯಕನಗರದಲ್ಲಿ ವಾಸವಾಗಿರುವ ಶ್ರೀ ಭೀಮಸಿ ಎಮ್ ಬೆಂಗೇರಿ ಇವರ ಮನೆಯ ಕೀಲಿ ಹಾಕಿದ ಚಿಲಕದ ಕೊಂಡಿಯನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 50 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 65,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದು ಇತ್ತು.
ಧಾರವಾಡ ವಿದ್ಯಾಗಿರಿ ಪೊಲೀಸರು ಒಬ್ಬ ವೆಂಕಟೇಶರೆಡ್ಡಿ ಅಲಿಯಾಸ ಇಮ್ತಿಯಾಜ ಶೇಖ ತಂದೆ ನಾಗರಾಜನ್, ವನ್ನಾರ. ಅಲಿಯಾಸ ಅಜಮೀರ ಶೇಖ ವಾಸ: ಹೊಸೂರ, ಶಾಂತಿನಗರ, ತಮಿಳುನಾಡು ರಾಜ್ಯ ಹಾಲಿವಾಸ: ಜನ್ನತನಗರ ಧಾರವಾಡ ಎಂಬ ವ್ಯಕ್ತಿಯನ್ನು ಬಂಧಿಸಿ ಸಮಗ್ರ ತನಿಖೆ ಮಾಡಿದಾಗ ಈ ಮೇಲ್ಕಾಣಿಸಿದ ಪ್ರದೇಶಗಳ ಮನೆಗಳ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿರುತ್ತದೆ. ಅಲ್ಲದೇ ಸದರಿ ಆರೋಪಿ ತಾನು ಕಳ್ಳತನ ಮಾಡಿದ ಮಾಲನ್ನು ಶಬ್ಬೀರ ರೆಹಮಾನಸಾಬ ಶೇಖ, ಜನ್ನತನಗರ ಧಾರವಾಡ ಇತನಿಗೆ ಮಾರಾಟ ಮಾಡಲು ಕೊಡುತ್ತಿರುವ ಸಂಗತಿ ತಿಳಿದು ಬಂದಿರುತ್ತದೆ.
ಪೊಲೀಸರು ಸದರಿ ಇಬ್ಬರು ಆರೋಪಿತರ ವಶದಿಂದ ಕಳ್ಳತನವಾದ ಒಡವೆಗಳನ್ನು ಜಪ್ತಿ ಮಾಡಿದ್ದು, ಮೇಲ್ಕಾಣಿಸಿದ ಪ್ರಕರಣಗಳ ಪಿರ್ಯಾದಿದಾರರು ಅವುಗಳನ್ನು ಗುರುತಿಸಿರುತ್ತಾರೆ.
