News In Kannada

ಬೆರಳ ತುದಿಯಲ್ಲಿ ಸಾರಿಗೆ ವ್ಯವಸ್ಥೆ ಮಾಹಿತಿ ಲಭ್ಯ

ಟ್ವಿಟರ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಅಧಿಕೃತ ಖಾತೆ ತೆರೆದ ವಾ.ಕ.ರ.ಸಾ.ಸಂಸ್ಥೆ

ಹುಬ್ಬಳ್ಳಿಮಾ19: ಯುವ ಜನರಿಂದ ಹಿಡಿದು ಎಲ್ಲಾ ವಯೋಮಾನದವರು ಇಂದು ಸ್ಮಾರ್ಟ್ ಪೋನ್ ‌ಗಳನ್ನು ಬಳಸುತ್ತಿದ್ದಾರೆ. ಅತಿ ಹೆಚ್ಚಿನ ಸಮಯವನ್ನು ಆನ್‌ಲೈನ್ ನಲ್ಲಿ ಕಳೆಯುತ್ತಿರುವ ಜನರಿಗೆ ಆಪ್ತವಾಗುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಮಾಜಿಕ ಜಾಣತಾಣಗಳನ್ನು ತೆರದು ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಿದೆ.

ಸಂಸ್ಥೆಯ ಹೊಸ ಯೋಜನೆಗಳು, ಕಾರ್ಯ ಚಟುವಟಿಕೆಗಳು, ಹೊಸ ಮಾರ್ಗಗಳು, ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆ, ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು, ವಿದ್ಯಾರ್ಥಿ ಪಾಸುಗಳು, ವಿವಿಧ ಮಾದರಿಯ ರಿಯಾಯಿತಿ ಪಾಸುಗಳು, ಪ್ರಾಸಂಗಿಕ ಕರಾರಿನ ಮೇಲೆ ಬಸ್ಸುಗಳನ್ನು ಪಡೆಯುವದು, ಬಸ್ ನಿಲ್ದಾಣಗಳ ದೂರವಾಣಿ ಸಂಖ್ಯೆ, ಸಂಸ್ಥೆಯ ವ್ಯಾಪ್ತ್ತಿಯಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟ ಮಾಹಿತಿ, ಸಾರ್ವಜನಿಕರ ಕುಂದುಕೊರತೆ, ಹಾಗೂ ಯಾವುದೇ ಮಾಹಿತಿಗಳನ್ನು ಸುಲಭವಾಗಿ ಸಾರ್ವಜನಿಕರು ಸಂಸ್ಥೆಯ ಅಧೀಕೃತ ವೆಬ್‌ಸೈಟ್ https://nwkrtc.karnataka.gov.in/ ನ ಮೂಲಕ ತಿಳಿದುಕೊಳ್ಳಬಹುದು.

ಇದರ ಜೊತೆಗೆ ಸಂಸ್ಥೆಯು ಸಾಮಾಜಿಕ ಜಾಲತಾಣಗಳಾದ ಟ್ವೀಟರ್, (https://twitter.com/nwkrtc) ಫೇಸಬುಕ್ (https://www.facebook.com/nwkrtc) ಹಾಗೂ ಇನ್ಸ್ಟಾಗ್ರಾಮ್ (www.instagram.com/nw_krtc) ಗಳಲ್ಲಿ ತನ್ನ ಅಧಿಕೃತ ಖಾತೆಗಳನ್ನು ತೆರೆದಿದೆ. ಲಿಂಕ್‌ಗಳನ್ನು ಬಳಸುವದರ ಮೂಲಕ ಸಾರ್ವಜನಿಕರು ಮಾಹಿತಿ ಪಡೆಯಬಹುದು. ದೂರದ ಮಾರ್ಗಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಮೊಬೈಲ್ ಆಪ್ ಹಾಗೂ www.ksrtc.in ವೆಬ್‌ಸೈಟ ಬಳಸುವದರ ಮೂಲಕ ಮುಂಗಡವಾಗಿ ಪ್ರಯಾಣದ ಟಿಕೇಟುಗಳನ್ನು ಕಾಯ್ದಿರಿಸಿಕೊಳ್ಳಬಹುದು. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾ.ಕ.ರ.ಸಾ.ಸ. ಕೇಂದ್ರ ಕಛೇರಿಯ ಮಾಹಿತಿ ತಂತ್ರಜ್ಞಾನ ಶಾಖೆಯ ಹೆಚ್. ರಾಮನಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
Pin Share

Leave a Reply

Your email address will not be published.

Back to top button
Close