NewsNews In Kannada

ಕೇಶ್ವಾಪುರ – ರೈಲ್ವೇ ಕೆಳಸೇತುವೆ ಸಂಪರ್ಕಿಸುವ ನೂತನ ರಸ್ತೆ ಲೋಕಾರ್ಪಣೆ

ಹುಬ್ಬಳ್ಳಿ, ಜ.27: 400 ಕೋಟಿ ರೂಪಾಯಿ ಕೇಂದ್ರ ರಸ್ತೆ ನಿಧಿಯಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಕೇಶ್ವಾಪುರದ ಸರ್ವೋದಯ ವೃತ್ತದಿಂದ ಗದಗ ರಸ್ತೆಯ ರೈಲ್ವೆ ಕೆಳಸೇತುವೆವರೆಗೆ ನಿರ್ಮಿಸಲಾಗಿರುವ ನೂತನ ಸಿ.ಸಿ. ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೇಂದ್ರ ರಸ್ತೆ ನಿಧಿ ಯೋಜನೆಯ 50 ಕೋಟಿ ರೂಪಾಯಿಗಳ ಅನುದಾನದಲ್ಲಿ ಗದಗ ರೈಲ್ವೇ ಕೆಳ ಸೇತುವೆಯಿಂದ ಕೇಶ್ವಾಪುರ, ಬೆಂಗೇರಿ, ಗೋಪನಕೊಪ್ಪ ಹಾಗೂ ಸಾಯಿನಗರ ಸಂಪರ್ಕಿಸುವ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಯೋಜನೆ ಹಂತದಲ್ಲಿ ಗದಗ ರಸ್ತೆಯ ರೈಲ್ವೇ ಕೆಳಸೇತುವೆಯಿಂದ ಕೇಶ್ವಾಪುರ ಸರ್ವೋದಯ ವೃತ್ತದಿಂದವರೆಗೆ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆಯ ಪಕ್ಕದಲ್ಲಿ ಪೇರ್ಯಸ್ ಅಳವಡಿಸಲಾಗಿದೆ. ಸುಸಜ್ಜಿತ ಫುಟ್ ‌ಪಾತ್ ನಿರ್ಮಿಸಲಾಗಿದೆ.ಬಿ.ಎಸ್.ಎನ್.ಎಲ್. ಜಲಮಂಡಳಿ, ಮಹಾನಗರ ಪಾಲಿಕೆ, ಹೆಸ್ಕಾಂ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ ರಸ್ತೆ ನಿರ್ಮಿಸಲು ಸೂಕ್ತ ನಿರ್ದೇಶನಗಳನ್ನು ನೀಡಿದ್ದೆ. ಇದರ ಫಲವಾಗಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡಿದೆ ಎಂದರು.

ಅವಳಿ ನಗರದ ಎಲ್ಲಾ ಮನೆಗಳಿಗೆ 24*7 ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ ಆ್ಯಂಡ್ ಟಿ ಕಂಪನಿಯ ಸರ್ವೇ ಕಾರ್ಯ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಕೊರೋನಾದಿಂದಾಗಿ ಕಾಮಗಾರಿ ವಿಳಂಬವಾಗುತ್ತಿವೆ. ಮುಂದಿನ ಆರು ತಿಂಗಳಲ್ಲಿ ಅವಳಿ ನಗರ ಸುಂದರ ನಗರವಾಗಲಿದೆ. ರಸ್ತೆ ಕಾಮಗಾರಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾಮಗಾರಿಯಿಂದ ಟ್ರಾಫಿಕ್ ಸಮಸ್ಯೆಯಾಗಲಿದ್ದು, ಜನರು ಸಹಕರಿಸಿಕೊಂಡು ಹೋಗಬೇಕು. ರಸ್ತೆ ಬದಿಯಲ್ಲಿರುವ ಮರಗಳನ್ನು ಉಳಿಸಿ, ಕಾಮಗಾರಿ ಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

Please follow and like us:
Pin Share

Leave a Reply

Your email address will not be published.

Back to top button
Close