NewsNews In Kannada
ಗುಟಕಾ ಸೇವಿಸಿ ಉಗಳಿದ ಹಾಗೂ ಧೂಮಪಾನ ಮಾಡಿದವರಿಗೆ ಸಾರಿಗೆ ವಿಭಾಗದಿಂದ 8500 ದಂಡ
ಹುಬ್ಬಳ್ಳಿ: ಹುಬ್ಬಳ್ಳಿ ನಗರ ಸಾರಿಗೆ ಬಸ್ ನಿಲ್ದಾಣ, ಹೊಸುರ ಉಪನಗರ ಬಸ್ ನಿಲ್ದಾಣ, ಬಿಆರ್ಟಿಎಸ್ ಬಸ್ ನಿಲ್ದಾಣ ಹಾಗೂ ಬಸ್ಗಳಲ್ಲಿ ತಂಬಾಕು, ಎಲೆ ಅಡಿಕೆ, ಗುಟಕಾ ಸೇವಿಸಿ ಉಗುಳಿದ ಹಾಗೂ ಧೂಮಪಾನ ಮಾಡಿ ಕಾನೂನು ಉಲ್ಲಂಘಿಸಿದ ಸುಮಾರು 70 ಜನರಿಗೆ ಹು-ಧಾ ನಗರ ಸಾರಿಗೆ ವಿಭಾಗದಿಂದ, ಜುಲೈ ತಿಂಗಳ ಅವಧಿಯಲ್ಲಿ 8500 ರೂ. ದಂಡ ವಿಧಿಸಲಾಗಿದೆ.
ದಂಡ ವಿಧಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್ಸು ಹಾಗೂ ಬಸ್ ನಿಲ್ದಾಣಗಳಲ್ಲಿ ಯಾವುದೇ ಕಾರಣಕ್ಕೂ ಗುಟಕಾ / ತಂಬಾಕು / ಎಲೆ ಅಡಿಕೆ ಸೇವನೆ ಮಾಡಿ ಎಲ್ಲೆಂದರಲ್ಲಿ ಉಗಿಯುವುದು ಹಾಗೂ ಧೂಮಪಾನ ಮಾಡಬಾರದೆಂದು ಹು-ಧಾ ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
