NewsNews In Kannada

ಹುಧಾಮನಪಾ ಚುನಾವಣೆ: ಇಂದು 9 ನಾಮಪತ್ರ ಸಲ್ಲಿಕೆ

ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಕ್ಕೆ ಸಂಬಂಧ ನಾಮಪತ್ರ ಸಲ್ಲಿಕೆಯ ನಾಲ್ಕನೇಯ ದಿನವಾದ ಇಂದು (ಆಗಸ್ಟ್ 19) ಒಂಭತ್ತು ನಾಮಪತ್ರಗಳು ಸಲ್ಲಿಕೆ ಆಗಿವೆ.

ಮಹಾನಗರ ಪಾಲಿಕೆಯ  3ನೇಯ ವಾರ್ಡ್- 1 ಬಿಜೆಪಿ, 4ನೇ ವಾರ್ಡ್- 1 ಪಕ್ಷೇತರ, 7ನೇ ವಾರ್ಡ್- 1 ಭಾ.ರಾ. ಕಾಂಗ್ರೆಸ್, 8ನೇ ವಾರ್ಡ್- 1 ಜೆಡಿಎಸ್,  33 ನೇ ವಾರ್ಡ- 1 ಆಮ್ ಆದ್ಮಿ ಪಾರ್ಟಿ,

46ನೇ ವಾರ್ಡ,- 2 ( 1 ಬಿಜೆಪಿ, 1 ಆಮ್ ಆದ್ಮಿ ಪಾರ್ಟಿ), 52ನೇ ವಾರ್ಡ್- 1  ಮತ್ತು 54 ನೇ ವಾರ್ಡ್- 1 ರಂತೆ ಆಮ್  ಆದ್ಮಿ ಪಾರ್ಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಒಟ್ಟು ಬಿಜೆಪಿ-2, ಭಾ.ರಾ.ಕಾಂಗ್ರೆಸ್- 1, ಜೆಡಿಎಸ್-1, ಎಎಪಿ-4, ಹಾಗೂ ಪಕ್ಷೇತರ 1 ಸೇರಿ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
Pin Share

Leave a Reply

Your email address will not be published.

Back to top button
Close