ಲೋಕಾರ್ಪಣೆಗೊಂಡ ಬೆಂಗೇರಿ ಮಾರುಕಟ್ಟೆಯಲ್ಲಿ ದೊರೆಯಲಿರುವ ಸೌಲಭ್ಯಗಳು

ಹುಬ್ಬಳ್ಳ : ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 12,700 ಚ.ಮೀ. ಪ್ರದೇಶದಲ್ಲಿ ರೂ.6.41 ಕೋಟಿ ವೆಚ್ಚದಲ್ಲಿ ಬೆಂಗೇರಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ, ಲೋಕಾರ್ಪಣೆಗೊಳಿಸಲಾಯಿತು. 400 ಕಟ್ಟಾಗಳಿಗೆ ವಾರದ ಮಾರುಕಟ್ಟೆ ಹಾಗೂ 800 ಜನರ ಕಾರ್ಯಕ್ರಮ ನಡೆಸಲು ಸ್ಥಳಾವಕಾಶವಿದೆ. 26 ಅಂಗಡಿಗಳನ್ನು ತೆರೆಯಬಹುದು. ವಾರದ ಮಾರುಕಟ್ಟೆಗೆ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಯೋಗ ಮತ್ತು ಧ್ಯಾನ ಮಾಡಲು ಸ್ಥಳಾವಕಾಶ, ವಾಕಿಂಗ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಅನುಕೂಲವಾಗಲಿದೆ.
ಮಾರುಕಟ್ಟೆಯಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಸಿಸಿಟಿವಿ, ವಿದ್ಯುತ್ ದೀಪ, ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ, ಎಲ್.ಇ.ಡಿ ಡಿಸ್ಪ್ಲೇ ಬೋರ್ಡ್, ಪ್ರತ್ಯೇಕ ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆಯನ್ನು ಮಾಡಲಾಗಿದೆ. 50 ದ್ವಿಚಕ್ರ ಹಾಗೂ 25 ನಾಲ್ಕು ಚಕ್ರದ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.
ಸಂಚಾರಿ ಗ್ರಂಥಾಲಯ ವಾಹನ
ಈಶರ್ ಕಂಪನಿಯ
ರೂ.25 ಲಕ್ಷದ ಸಂಚಾರಿ ಗ್ರಂಥಾಲಯ ವಾಹನಕ್ಕೆ ಚಾಲನೆ ನೀಡಲಾಯಿತು. ಗ್ರಂಥಪಾಲಕರಿಗೆ ಮೇಜು, 2 ಮ್ಯಾಗಜೀನ್ ರ್ಯಾಕ್, ಪುಸ್ತಕಗಳ ರ್ಯಾಕ್, 6 ಜನರು ಅಧ್ಯಯನ ನಡೆಸಲು ಆಸನ ಸೌಲಭ್ಯವನ್ನು ಹೊಂದಿದೆ. ಸಿಸಿಟಿವಿ, ಯುಪಿಎಸ್ ಅಳವಡಿಕೆ, ಪುಸ್ತಕಗಳಿಗೆ ಸಂಗ್ರಹಣೆಯ ಸ್ಥಳ, ಬಿಲ್ಲಿಂಗ್ ಡೆಸ್ಕ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸ್ಕ್ರೀನ್ ವ್ಯವಸ್ಥೆಯನ್ನು ವಾಹನ ಒಳಗೊಂಡಿರುತ್ತದೆ. ಪುಸ್ತಕಗಳನ್ನು ಎರವಲು ಪಡೆಯುವ ಸೌಲಭ್ಯವಿರಲಿದೆ.
