News In KannadaNorth Karnataka
ಬಿಜೆಪಿಯ ಈರೇಶ್ ಅಂಚಟಗೇರಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್
ಹುಬ್ಬಳ್ಳಿ, ಮೇ 28: ಇಂದು ನಡೆದಂತ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದೆ. ನೂತನ ಮೇಯರ್ ಆಗಿ ಬಿಜೆಪಿಯ ಈರೇಶ್ ಅಂಚಟಗೇರಿ ಆಯ್ಕೆಯಾಗಿದ್ದಾರೆ.
50 ಮತಗಳ ಅಂತರದಿಂದ ಈರೇಶ್ ಅಂಚಟಗೇರಿ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಸತತ ಮೂರನೇ ಬಾರಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮೇಯರ್ ಅಧಿಕಾರದ ಗದ್ದುಗೆ ಏರಿದಂತೆ ಆಗಿದೆ.
ಆಯ್ಕೆಯಾದಂತ ಈರೇಶ್ ಅಂಚಟಗೇರಿ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಆಪ್ತರಾಗಿದ್ದಾರೆ.