NewsNews In Kannada

ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ ಮೂಲಕ ಟೆಲಿಮೆಡಿಸಿನ್ ಸೇವೆ

ಧಾರವಾಡ, ಜ.17: ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ-ಟೆಲಿಮೆಡಿಸಿನ್ ಸೇವೆ ಎಲ್ಲಾ ಕೋವಿಡ್-19 ಸೊಂಕಿತರು ಮನೆಯಲ್ಲಿ ಹಾಗೂ ಕ್ವಾರೆಂಟೈನ್ ಅಲ್ಲಿ ಇರುವಂತವರು, ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ (OPD) ಮೂಲಕ ಟೆಲಿಕನ್ಸಲ್ಟೇಷನ್ ಸೇವೆಗಳ ಲಾಭ ಪಡೆದುಕೊಳ್ಳಬಹುದು.  ಅದಕ್ಕಾಗಿ ತ್ವರಿತ ಮಾರ್ಗದರ್ಶಿ ಹಾಗೂ  ಎಲ್ಲಾ ಸೇವೆಗಳ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.

                ಟೆಲಿಮೆಡಿಸನ್ ಕಾರ್ಯನಿರ್ವಹಿಸುವ ವಿಧಾನ ಗೂಗಲ್ ಪ್ಲೇ ಅಥವಾ ಆಪ್ ಸ್ಟೋರ್‍ನಿಂದ ಇ-ಸಂಜೀವಿನಿ ಓಪಿಡಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ನೋಂದಣಿ ಮತ್ತು ಟೋಕನ್ ಜನರೇಷನ್ ಮಾಡಬೇಕು. ಮತ್ತು ಓಟಿಪಿ ಬಳಸಿಕೊಂಡು ನಿಮ್ಮ (ಸೋಂಕಿತರು) ಬೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು. ಇ-ಸಂಜೀವಿನಿಯಲ್ಲಿ ರೋಗಿಯ ನೋಂದಣಿಯ ಫಾರ್ಮ್‍ಅನ್ನು ಭರ್ತಿ ಮಾಡಿ, ಆರೋಗ್ಯ ಸಂಬಂಧಿತ ದಾಖಲೆಗಳಿದ್ದಲ್ಲಿ ಅಪ್‍ಲೊಡ್ ಮಾಡಬೇಕು. ನಂತರ ಬರುವ ಎಸ್‍ಎಂಎಸ್ ನಲ್ಲಿ ರೋಗಿ ಐಡಿ ಮತ್ತು ಟೋಕನ್ ಅನ್ನು ಸ್ವೀಕರಿಸಬೇಕು.

ಲಾಗಿನ್ ಮಾಡುವುದು : ರೋಗಿಯ ಐಡಿಯೊಂದಿಗೆ ಲಾಗಿನ್ ಆಗಬೇಕು. ವರ್ಚುವಲ್ ಕರೆ ಬಟನ್ ಒತ್ತಿದಾಗ, ಸಕ್ರೀಯಗೊಳಿಸಲಾಗುತ್ತದೆ. ಆಗ ರೋಗಿಯು ವಿಡಿಯೋ ಕರೆಯನ್ನು ಪ್ರಾರಂಭಿಸಿಬಹುದು.

ವಿಡಿಯೋ ಕರೆ : ವಿಡಿಯೋ ಕರೆ ಮಾಡಿದಾಗ ರೋಗಿಯು ವೈದ್ಯರನ್ನು ಸಂಪರ್ಕಿಸಿ, ಅವರಿಂದ ತಕ್ಷಣ ಇ-ಪ್ರಿಸ್ಕ್ರಿಪ್ಷನ್, ಆನ್‍ಲೈನ್ ಓಪಿಡಿ,  ರಿಯಲ್ ಟೈಮ್ ಟೆಲಿಮೆಡಿಸನ್ ಹಾಗೂ ರಾಜ್ಯ ಸೇವೆಗಳ ವೈದ್ಯರಿಂದ ಅಗತ್ಯ ಮಾಹಿತಿ ಪಡೆಯಬಹುದು. ಹಾಗೂ ವಿಡಿಯೋ ಸಮಾಲೋಚನೆಗಳು, ಚಾಟ್‍ಮಾಡಿ ಆರೋಗ್ಯ ಕುರಿತ ಆಪ್ತಸಮಾಲೋಚನೆ ಜರುಗಿಸಬಹುದು.

                ವಿಡಿಯೋ ಕರೆ ಮಾಡಿದಾಗ ರೋಗಿಯು ರಾಜ್ಯ ಸೇವೆಗಳ ವೈದ್ಯರಲ್ಲಿ ತಮ್ಮ ಖಾಯಿಲೆಯ ಬಗ್ಗೆ ಚರ್ಚಿಸಿ ಸೂಕ್ತ ಚಿಕಿತ್ಸೆ, ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆಯನ್ನು ಪಡೆದು ನಂತರ ಬರುವ ಇ-ಪ್ರಿಸ್ಕ್ರಿಪ್ಷನ್ (ePrescription) ಅನ್ನು ಡೌನ್‍ಲೋಡ್ ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಳ್ಳಬಹುದು. 

                ಇ-ಸಂಜೀವಿಗಾಗಿ ಸಹಾಯವಾಣಿ ಸಂಖ್ಯೆ + 91-11-23978046, ಟೋಲ್ ಫ್ರೀ : 1075, ಸಹಾಯವಾಣಿ ಇ-ಮೇಲ್: [email protected], ವೆಬ್‍ಸೈಟ್: https://esanjeevaniopd.in/ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

******

Please follow and like us:

Leave a Reply

Your email address will not be published.

Back to top button
Close