News

ಅಲೆಮಾರಿ ಸಮುದಾಯಗಳು ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆದೆಕೊಳ್ಳಬೇಕು : ಚೇತನ್ ಹಿರೇಕೆರೂರು 

ಹುಬ್ಬಳ್ಳಿ .ಫೆ.06: ಅಲೆಮಾರಿ ಹಾಗೂ ಅರೆ ಅಲೆಮಾರಿಗಳ ಸಮುದಾಯದ ಜನಸಂಖ್ಯೆ ಕಡಿಮೆಯಿದೆ. ಸರ್ಕಾರ  ಈ  ಸಣ್ಣ ಜಾತಿಗಳನ್ನು ಗುರುತಿಸಿ ಸವಲತ್ತುಗಳನ್ನು ನೀಡಿದೆ, ಇವುಗಳ ಸದುಪಯೋಗ ಪಡೆದುಕೊಳ್ಳಬೇಕು  ಎಂದು  ಎಂದು ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಹೇಳಿದರು.

ಹೆಗ್ಗೇರಿ, ಜಗದೀಶ ಕಾಲೋನಿಯ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾದ, ಅಲೆಮಾರಿ  ಹಾಗೂ ಅರೆಅಲೆಮಾರಿ ಸಮುದಾಯದವರಿಗೆ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಅತ್ಯಮೂಲ್ಯವಾದುದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ. ಅಲೆಮಾರಿ ಸಮುದಾಯಗಳಲ್ಲಿ ಬದಲಾವಣೆ‌ ತರಲು ಶಿಕ್ಷಣ ದೊಡ್ಡ ಅಸ್ತ್ರವಾಗಿದೆ. ಶಿಕ್ಷಣ ಜಾಗೃತಿರನ್ನಾಗಿ ಮಾಡುತ್ತದೆ. ಶೋಷಣೆ ಒಳಗಾದವರಿಗೆ  ಹಿತಕ್ಕಾಗಿ  ಹಿಂದುಳಿದ ವರ್ಗಗಳ ಇಲಾಖೆ ಶ್ರಮಿಸುತ್ತಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಿಂದುಳಿದ ಜಾತಿಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಸಣ್ಣ ಜಾತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನ ಮಾಡಿದರು. ಸರ್ಕಾರ ಅಲೆಮಾರಿ ಹಾಗೂ  ಅರೆಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದರ ಮೂಲಕ ಶೈಕ್ಷಣಿಕ ಸಾಲ, ಉದ್ಯೋಗ ಸಾಲ, ಗಂಗಾ ಕಲ್ಯಾಣ ಯೋಜನೆ, ಮನೆ ನಿರ್ಮಾಣ, ಸಮುದಾಯಗಳು ವಾಸಿಸುವ ಕಾಲೋನಿಗಳ ಮೂಲಭೂತ  ಸೌಕರ್ಯಗಳನ್ನು ಒದಗಿಸಲು ಶ್ರಮಿಸಿತ್ತಿಸೆ ಎಂದರು.

ತಾಲೂಕು ವಿಸ್ತರಣಾಧಿಕಾರಿ ಸುರೇಶ್ ಗುರಣ್ಣನವರ ಹಾಗೂ ದೇವರಾಜು ಅರಸು ಅಭಿವೃದ್ಧಿ ನಿಗಮದ ಶರಣಬಸವ ಅವರು ಸರ್ಕಾರ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಿದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ.ಕರ್ವೀರಮಠ ಸ್ವಾಗತಿಸಿದರು. ಶಿಕ್ಕಲಿಗರ ಸಂಘದ ಅಧ್ಯಕ್ಷ  ನಾಗರಾಜ‌ ಕಟ್ಟಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಮುದಾಯದ ಮುಖಂಡರಾದ ಹರೀಶ್ ಜಂಗ್ಲಿ, ಬಸವರಾಜ ಕಟ್ಟಿಮನಿ, ಮಂಜು ಮುದ್ದಿ, ಅಶೋಕ್ ಕಟ್ಟಿಮನಿ, ಸಂಜೀವ್ ಕೊಟಬಾಗಿ ಸೇರಿದಂತೆ ಮತ್ತಿತರು  ಇದ್ದರು.

Please follow and like us:
Pin Share

Leave a Reply

Your email address will not be published.

Back to top button
Close