KarnatakaNews In Kannada

ಸಂಜೆ 6 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ.71.76 ರಷ್ಟು ಮತದಾನ; 6 ಗಂಟೆ ನಂತರವೂ ಕೆಲ ಮತಗಟ್ಟೆಗಳಲ್ಲಿ ಮುಂದುವರಿದಿರುವ ಮತದಾನ

ಧಾರವಾಡ, ಮೇ.10: ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿದ್ದು,ಸಂಜೆ 6 ಗಂಟೆಯವರೆಗೆ ಅಂದಾಜು ಶೇ.71.76 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

 

ಅವರು ಮಾಧ್ಯಮ ಪ್ರಕಟಣೆ ನೀಡಿ, ಭಾರತ ಚುನಾವಣಾ ಆಯೋಗದ ಆದೇಶದಂತೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ಮತದಾನ ಕಾರ್ಯ ನಡೆದಿದೆ. ಜಿಲ್ಲೆಯ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.

 

ಸಂಜೆ 6 ಗಂಟೆಯವರೆಗೆ ಶೇ.71.76 ರಷ್ಟು ಮತದಾನವಾಗಿದೆ. ಮತ್ತು ಸಂಜೆ 6 ಗಂಟೆ ನಂತರ ಮತಗಟ್ಟೆ ಆವರಣದಲ್ಲಿ, ಸರತಿ ಸಾಲಿನಲ್ಲಿದ್ದ ಮತದಾರರು ಕುಂದಗೋಳ, ನವಲಗುಂದ ಮತಕ್ಷೇತ್ರಗಳಲ್ಲಿ ಇನ್ನು ಮತದಾನ ಮಾಡುತ್ತಿದ್ದು, ಈಗ ಅಂತಿಮ ಹಂತಕ್ಕೆ ಬಂದಿದೆ.

 

ಮತದಾನ ಪೂರ್ಣಗೊಳ್ಳುವ ಹೊತ್ತಿಗೆ ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದ ಶೇ. 70.70 ಕ್ಕಿಂತ ಹೆಚ್ಚು ಮತದಾನವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

ಸದ್ಯದಲ್ಲಿ ಮತದಾನ ಕಾರ್ಯ ಪೂರ್ಣಗೊಳ್ಳಲಿದ್ದು, ಜಿಲ್ಲೆಯ ಮತದಾನದ ಅಂತಿಮ ವಿವರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close