NewsNews In KannadaNorth Karnataka

ಶಾಲೆ ಕಟ್ಟಡದ ಗೋಡೆ ಕುಸಿತ; ಶಾಲಾ ಶಿಕ್ಷಣ ಇಲಾಖೆಯ ಮುಂಜಾಗೃತೆಯಿಂದ ತಪ್ಪಿದ ಅವಘಡ

ಧಾರವಾಡ, ಜು.27: ನಿರಂತರ ಮಳೆಯಿಂದಾಗಿ ನಿನ್ನೆ ರಾತ್ರಿಯ ಮಳೆಗೆ ನೆನೆದು ಅಳ್ನಾವರ ತಾಲೂಕಿನ ಶಿವನಗರ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದೆ. ಶಾಲಾ ಶಿಕ್ಷಣ ಇಲಾಖೆ ಮುಂಜಾಗ್ರತವಾಗಿ ಜುಲೈ 25 ರಂದು ಶಿವನಗರದ ದುಂದು ಗೌಳಿ ಅವರ ಖಾಸಗಿ ಕಟ್ಟಡಕ್ಕೆ ಶಾಲಾ ಶೈಕ್ಷಣಿಕ ಕಾರ್ಯಗಳನ್ನು ಸ್ಥಳಾಂತರಿಸಬೇಕೆಂದು ನಿರ್ಧರಿಸಿ, ಜುಲೈ 26 ರಂದು ಶಿವನಗರ ಶಾಲಾ ಮಕ್ಕಳಿಗೆ ರಜೆ ನೀಡಲಾಗಿತ್ತು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್ ಸದಲಗಿ ಅವರು ತಿಳಿಸಿದ್ದಾರೆ.

 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂದಿನಂತೆ ಜುಲೈ 27 ರಿಂದ ವಿಧ್ಯಾರ್ಥಿಗಳಿಗೆ ಶಾಲಾ ವರ್ಗಗಳನ್ನು ಬಾಡಿಗೆ ಕಟ್ಟಡದಲ್ಲಿಯೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಜು.26 ರಾತ್ರಿ ಜಿಲ್ಲಾಡಳಿತವು ರಜೆ ಘೋಷಿಸಿದ್ದರಿಂದ ಇಂದು ಮಕ್ಕಳಿಗೆ ರಜೆ ನೀಡಲಾಗಿತ್ತು. ಹೀಗಾಗಿ ಶಿವನಗರ ಶಾಲೆಯ ಕಟ್ಟಡದ ಗೋಡೆ ಇಂದು ಮುಂಜಾನೆ ಕುಸಿದು ಬಿದ್ದಿದ್ದು, ಮುಂಜಾಗೃತೆವಹಿಸಿ ಶಾಲೆಯನ್ನು ಹಿಂದಿನ ದಿನದ ಪೂರ್ವದಲ್ಲಿ ಸ್ಥಳಾಂತರ ಮಾಡಿದ್ದರಿಂದ ಅವಘಡ ತಪ್ಪಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಲಗಿ ಅವರು ತಿಳಿಸಿದ್ದಾರೆ.

 

ಕಳೆದ ಜುಲೈ 23 ರಂದು ಜಿಲ್ಲಾ ಉಸ್ತುವಾರಿ ಸಚಿವರು ಶಿವನಗರ ಶಾಲೆಗೆ ಭೇಟಿ ನೀಡಿದ್ದರು ಮತ್ತು ಜಿಲ್ಲಾಧಿಕಾರಿಗಳು ಪರಿಶೀಲಿಸಿದ್ದರು. ಮಾನ್ಯ ಸಚಿವರ ಮತ್ತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹೊಸ ಕಟ್ಟಡ ನಿರ್ಮಿಸುವವರೆಗೆ ತಾತ್ಕಾಲಿಕವಾಗಿ ಶಿವನಗರ ಶಾಲಾ ಸ್ಥಳಾಂತರಕ್ಕೆ ಕ್ರಮವಹಿಸಲಾಗಿದೆ. ಮತ್ತು ಕಳೆದ ಜುಲೈ 20 ರಂದು ಉಪನಿರ್ದೇಶಕರು ನೀಡಿದ್ದ ಸೂಚನೆ ಮೇರೆಗೆ ಅಂದೇ ಭೇಟಿ ನೀಡಿ, ಸ್ಥಳ ಪರಿಶೀಲಿಸಿ, ಶಾಲಾ ಕೊಠಡಿ ಸೋರುತ್ತಿರುವ ಬಗ್ಗೆ ಗಮನಿಸಿ, ಪಕ್ಕದ ಕೊಠಡಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ, ಅಲ್ಲಿಯೇ ಪಾಠ ಮಾಡಲಾಗುತ್ತಿತ್ತು.

ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close