News In KannadaNorth Karnataka

ಕಲಬುರಗಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್

ಕಲಬುರಗಿ,ಜೂನ್ 3 : ಕಲಬುರಗಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ವೊಂದು ಹೊತ್ತಿ ಉರಿದ ಪರಿಣಾಮ ನಾಲ್ವರು ಪ್ರಯಾಣಿಕರು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ಹೊರವಲಯದ ಹೆದ್ದಾರಿಯಲ್ಲಿ ಬಸ್ ವೊಂದು ಹೊತ್ತಿ ಉರಿದ ಪರಿಣಾಮ ನಾಲ್ವರು ಸಜೀವ ದಹವಾಗಿದ್ದಾರೆ.

ಬಸ್ ಗೋವಾದಿಂದ ಕಲಬುರಗಿ ಮಾರ್ಗವಾಗಿ ಹೈದರಾಬಾದ್ ಗೆ ಹೋಗುತ್ತಿತ್ತು. 407 ಗೂಡ್ಸ್ ಕಲಬುರಗಿ ಕಡೆಗೆ ಬರುತ್ತಿತ್ತು. ಅಪಘಾತ ಅತ್ಯಂತ ರಣ ಭೀಕರವಾಗಿದೆ. ಇಂತಹ ಘಟನೆ ನಾವು ನೋಡಿಲ್ಲ ಎಂದು ಪ್ರತ್ಯೇಕ್ಷದರ್ಶಿಗಳು ನೋವಿನಿಂದ ಹೇಳಿಕೊಂಡರು.

ಸುಟ್ಟಿರುವ ಬಸ್ಸಿನಲ್ಲಿ 30 ಪ್ರಯಾಣಿಕರಿದ್ದರು. ಅವರಲ್ಲಿ ಹದಿನೈದು ಜನರು ಹೊರ‌ಬಂದಿರುವ ಲೆಕ್ಕ ಸಿಕ್ಕಿದೆ. ಇನ್ನೂ ಕೆಲವರು ಪಾರಾಗಿ ಹೊರ ಬಂದಿರುವಂತಿದೆ. ಬಸ್ಸಿನಲ್ಲಿ ಸಿಲುಕಿದವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಹೇಳಲಾಗುತ್ತಿದೆ.

ಸ್ತಳಕ್ಕೆ ಎಸ್ಪಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಅವರು ದೌಡಾಯಿಸಿ ರಕ್ಷಣಾ ಕಾರ್ಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ‌. ಕಮಲಾಪುರ ಪೊಲೀಸರು ಸ್ಥಳದಲ್ಲಿ ಇದ್ದಾರೆ . ಸ್ಥಳೀಯರು ರಕ್ಷಣಾ ಕೆಲಸಕ್ಕೆ ಕೈಜೋಡಿಸಿದ್ದಾರೆ‌.

Please follow and like us:
Pin Share

Leave a Reply

Your email address will not be published.

Back to top button
Close